ಕಾರು ಅಪಘಾತಕ್ಕೀಡಾದ ವ್ಯಕ್ತಿಯ ರಕ್ಷಣೆಗೆ ಬಂದ ಭಾರತದ ವೇಗಿ ಮೊಹಮ್ಮದ್ ಶಮಿ
ಉತ್ತರಾಖಂಡ: ನೈನಿತಾಲ್ ಬಳಿ ಕಾರು ಅಪಘಾತಕ್ಕೀಡಾದ ವ್ಯಕ್ತಿಯನ್ನು ಮೊಹಮ್ಮದ್ ಶಮಿ ಶನಿವಾರ ರಕ್ಷಿಸಿದ್ದಾರೆ. ಶಮಿ ಅವರು ಗಿರಿಧಾಮಕ್ಕೆ ಹೋಗುತ್ತಿದ್ದಾಗ ಬೆಟ್ಟದಿಂದ ಕೆಳಗೆ ಬೀಳುತ್ತಿರುವ ಕಾರನ್ನು ನೋಡಿದದ್ದು, ಅಪಘಾತದಲ್ಲಿ ಪ್ರಾಣ ಕಳೆಸುಕೊಳ್ಳುತ್ತಿದ್ದವರ ಜೀವ ಉಳಿಸಿದ್ದಾರೆ.
ಶಮಿ ಶನಿವಾರ ರಾತ್ರಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನೈನಿತಾಲ್ ಬಳಿ ಕಾರು ಅಪಘಾತದಲ್ಲಿ ಬದುಕುಳಿದ ವ್ಯಕ್ತಿಗೆ ಸಹಾಯ ಮಾಡುತ್ತಿರುವ ಘಟನೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ʻಅವನು ತುಂಬಾ ಅದೃಷ್ಟಶಾಲಿ ದೇವರು ಅವನಿಗೆ 2 ನೇ ಜೀವನವನ್ನು ಕೊಟ್ಟನು, ಅವನ ಕಾರು ನನ್ನ ಮುಂದೆ ನ್ಯಾನಿತಾಲ್ ಬಳಿಯ ಬೆಟ್ಟದ ರಸ್ತೆಯಿಂದ ಕೆಳಗೆ ಬಿದ್ದಿತು. ನಾವು ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ದಿದ್ದೇವೆʼ “I am happy to save someone” ಎಂದು ವೀಡಿಯೊದ ಶೀರ್ಷಿಕೆಯನ್ನು ಬರೆಯಲಾಗಿದೆ.