17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್
ಈಜಿಪ್ಟ್: ದೀರ್ಘಕಾಲದ ವಿಳಂಬದ ಬಳಿಕ ಹಮಾಸ್ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಈಜಿಪ್ಟ್ ಗೆ ಕಳುಹಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ರೆಡ್ ಕ್ರಾಸ್ ಈ ಒತ್ತೆಯಾಳುಗಳನ್ನು ಈಜಿಪ್ಟಿಗೆ ಹಸ್ತಾಂತರಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ತಿಳಿಸಿದೆ.
ಒತ್ತೆಯಾಳುಗಳಲ್ಲಿ 13 ಇಸ್ರೇಲಿ ನಾಗರಿಕರು ಮತ್ತು ನಾಲ್ವರು ಥಾಯ್ ಪ್ರಜೆಗಳು ಸೇರಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ಭಾನುವಾರ ವರದಿ ಮಾಡಿದೆ. ಒತ್ತೆಯಾಳುಗಳನ್ನು ಹೊತ್ತ ಬೆಂಗಾವಲು ಕೆರೆಮ್ ಶಾಲೋಮ್ ಕ್ರಾಸಿಂಗ್ಗೆ ತೆರಳಲಿದ್ದು, ಅಲ್ಲಿ ಇಸ್ರೇಲಿ ಅಧಿಕಾರಿಗಳು ಹೆಸರುಗಳ ಪಟ್ಟಿಯನ್ನು ಪರಿಶೀಲಿಸಲಿದ್ದಾರೆ.