350 ರೂಪಾಯಿಗೋಸ್ಕರ 18 ವರ್ಷದ ಯುವಕನನ್ನು ಕೊಲೆಗೈದ 16 ವರ್ಷದ ಯುವಕ
ನವದೆಹಲಿ: ಕೇವಲ 350 ರೂಪಾಯಿಗೋಸ್ಕರ 16 ವರ್ಷದ ಬಾಲಕನೋರ್ವ 18 ವರ್ಷದ ಯುವಕನನ್ನು ಉಸಿರುಗಟ್ಟಿಸಿ ಬಳಿಕ ಚಾಕುವಿನಿಂದ 60ಕ್ಕೂ ಹೆಚ್ಚು ಬಾರಿ ಇರಿದು ಕೊಲೆಗೈದ ಭೀಬತ್ಸ ಘಟನೆ ಈಶಾನ್ಯ ದೆಹಲಿಯ ವೆಲ್‌ಕಮ್‌ನ ರಸ್ತೆಯಲ್ಲಿ ನಡೆದಿದೆ.
ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳಿಸುವಂತಿದೆ, ಈ ವೇಳೆ ಕೈಯಲ್ಲಿ ಚಾಕು ಹಿಡಿದಿರುವ ಬಾಲಕ ಯುವಕನ ಮೇಲೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ.
ಅಲ್ಲದೆ ಅಲ್ಲಿನ ಸ್ಥಳೀಯರಿಗೆ ಚಾಕು ತೋರಿಸಿ ಬೆದರಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಷ್ಟು ಮಾತ್ರವಲ್ಲದೆ ಹತ್ಯೆಗೈದ ಬಾಲಕ ಶವದ ಬಳಿ ನಿಂತು ಡಾನ್ಸ್ ಮಾಡುತ್ತಿರುವುದು ಕಂಡುಬಂದಿದೆ.