ತಮಾಷೆಗಾಗಿ ಎಸೆದ ಪಟಾಕಿ ವ್ಯಕ್ತಿಯ ಮೈಮೇಲೆ ಸಿಡಿದು ಸಾವು
ಲಕ್ನೋ: ವ್ಯಕ್ತಿಯೊಬ್ಬನನ್ನು ಭಯಪಡಿಸಲು ತಮಾಷೆಗಾಗಿ ಎಸೆದ ಪಟಾಕಿ ಆತನನ್ನು ಬಲಿ ಪಡೆದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ನಾತು ಅಕಾ ಅಫ್ಜಲ್ ಎಂದು ಗುರುತಿಸಲಾಗಿದೆ. ದೀಪಾವಳಿ ಆಚರಣೆ ವೇಳೆ ಆತನ ಮೇಲೆ ಪಟಾಕಿ ಹಚ್ಚಿ ಎಸೆಯಲಾಗಿದೆ.
ವ್ಯಕ್ತಿ ಪಟಾಕಿ ಸಿಡಿದ ಶಬ್ದದಿಂದ ಆತಂಕಕ್ಕೊಳಗಾಗಿ ಕುಸಿದು ಬಿದ್ದಿದ್ದಾನೆ. ಬಳಿಕ ಅಲ್ಲಿಯೇ ಸಾವಿಗೀಡಾಗಿದ್ದಾನೆ.





