ದೇವರಿಗೆ ಕೈ ಮುಗಿದು ದೇವಸ್ಥಾನದ ಹುಂಡಿ ದೋಚಿದ ಕಳ್ಳರು
ಬೀದರ್: ದೇವರಿಗೆ ಕೈ ಮುಗಿದು, ದೇವಸ್ಥಾನದ ಹುಂಡಿ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಉಡಬಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯಲ್ಲಮ್ಮ ದೇವಸ್ಥಾನದಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮುಖಕ್ಕೆ ಟವೆಲ್, ಮಾಸ್ಕ್ ಹಾಕಿಕೊಂಡು ಬಂದು ಹುಂಡಿ ಹೊತ್ತೊಯ್ದಿದ್ದಾರೆ. ಕಳ್ಳತನದ ದೃಶ್ಯ ದೇವಸ್ಥಾನದಲ್ಲಿ ಆಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ





