ಕಡೂರು: ಮುರಾರ್ಜಿ ವಸತಿ ಶಾಲೆಯ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಆರೋಗ್ಯ ಇಲಾಖೆಯ ನರ್ಸ್ ಸಹಿತ ಮೂವರ ಬಂಧನ
ಕಡೂರು: ತಾಲೂಕಿನ ಕುಪ್ಪಾಳು ಮುರಾರ್ಜಿ ವಸತಿ ಶಾಲೆಯ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಪೋಕ್ಸೋ ಪ್ರಕರಣದಡಿಯಲ್ಲಿ ಮೂವರನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಚನ್ನರಾಯಪಟ್ಟಣ ತಾಲೂಕು ನುಗ್ಗೆಹಳ್ಳಿ ಹೋಬಳಿಯ ಮುಳುಕೆರೆ ಗ್ರಾಮದ ನಿವಾಸಿ ಚಂದನ (26),(ಕಡೂರು ತಾಲೂಕು ಅಂಚೆಚೋಮನಹಳ್ಳಿಯ ಆರೋಗ್ಯ ಇಲಾಖೆಯಲ್ಲಿ ಎಎನ್‌ಎಂ ನರ್ಸ್), ಎರಡನೇ ಆರೋಪಿ ಅಂಚೆಚೋಮನಹಳ್ಳಿಯ ಗ್ರಾಮದ ತೊಟ್ಟಿಮನೆ ಸುರೇಶ್(35), ಮೂರನೇ ಆರೋಪಿ ಸೊರಬ ತಾಲೂಕಿನ ಆನವಟ್ಟಿಯ ಫ್ಯಾನ್ಸಿಸ್ಟೋರ್ ಮಾಲೀಕ ವಿನಯ್ ಕುಮಾರ್(27) ಬಂಧಿತ ಆರೋಪಿಗಳಾಗಿದ್ದಾರೆ.
ವಸತಿ ಶಾಲೆಯ ಪ್ರಾಂಶುಪಾಲರು ನೀಡಿದ ದೂರಿನ ಮೇರೆಗೆ ತರೀಕೆರೆ ಡಿವೈಎಸ್‌ಪಿ ಹಾಲಮೂರ್ತಿ ರಾವ್ ಅವರ ತಂಡವು ಕಾರ್ಯಾಚರಣೆ ಆರಂಭಿಸಿ ನಂ ೮ ರಂದು ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ಡಿವೈಎಸ್‌ಪಿ ಮಾಹಿತಿ ನೀಡಿದರು.





