ವಿಟಿವಿ ವಿಟ್ಲ ಸಾರಥ್ಯದಲ್ಲಿ “ಜ್ಞಾನದಾಟ – ಮಕ್ಕಳ ಸ್ಪರ್ಧಾ ಕೂಟ” ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ
ವಿಟ್ಲ: ವಿಟಿವಿ ವಿಟ್ಲ ಇವರ ಸಾರಥ್ಯದಲ್ಲಿ ಪುಟ್ಟ ಮಕ್ಕಳಲ್ಲಿ ಓದುವಿಕೆಯ ಆಸಕ್ತಿ ಚಿಗುರಿಸುವ ದಿಟ್ಟ ಹೆಜ್ಜೆಗಾಗಿ “ಜ್ಞಾನದಾಟ – ಮಕ್ಕಳ ಸ್ಪರ್ಧಾ ಕೂಟ” ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. “ಜ್ಞಾನದಾಟ – ಮಕ್ಕಳ ಸ್ಪರ್ಧಾ ಕೂಟ” ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ನೈಜ್ಯ-ನಿಖರ-ನಿರ್ಭೀತಿ ಸುದ್ದಿಯನ್ನು ಭಿತ್ತರಿಸಿ ಇಂದು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ತನ್ನದೇ ವಿಭಿನ್ನ ಶೈಲಿಯೊಂದಿಗೆ ಮಾಧ್ಯಮ ರಂಗದಲ್ಲಿ ಹೆಸರುವಾಸಿಯಾದ ವಿಟಿವಿ ವಿಟ್ಲ ಯಶಸ್ವಿ 6 ವರ್ಷಗಳನ್ನು ಪೂರೈಸಿ 7 ನೇ ವರ್ಷಕ್ಕೆ ಪಾದಾರ್ಪಣೆಗೊಂಡ ಸಂಭ್ರಮದಲ್ಲಿ ಸಮಾಜದಲ್ಲಿ ಪತ್ರಿಕಾ ಮತ್ತು ಮಾಧ್ಯಮ ರಂಗದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಕ್ಕಳ ಜ್ಞಾನ ಕೌಶಲ್ಯತೆಯ ಅಭಿವೃದ್ಧಿಗಾಗಿ ಈ ಸ್ಪರ್ಧಾಕೂಟವನ್ನು ಆಯೋಜಿಸಲಾಗಿದೆ.
“ಜ್ಞಾನದಾಟ – ಮಕ್ಕಳ ಸ್ಪರ್ಧಾ ಕೂಟ” ಆಮಂತ್ರಣ ಪತ್ರಿಕೆಯನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್‌ರವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ “ವಿಟಿವಿ ಇಂದು ಸಮಾಜದಲ್ಲಿ ನಡೆಯುವ ಆಗು-ಹೋಗುಗಳ ಸುದ್ದಿಗಳನ್ನು ಭಿತ್ತರಿಸುವ ಕಾರ್ಯ ಮಾತ್ರವಲ್ಲದೇ, ಈ ಸ್ಪರ್ಧಾತ್ಮಕ ಯುಗದಲ್ಲಿ ಸಮಾಜದ ಜನರನ್ನು ಒಂದುಗೂಡಿಸುವ ಪ್ರಯತ್ನವನ್ನು ಮಾಡುತ್ತಿದೆ. ಈ ಹಿಂದೆಯೂ ಯಶಸ್ವಿಯಾಗಿ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದೀಗ ಹೊಸ ವಿಚಾರಧಾರೆಯನ್ನಿಟ್ಟುಕೊಂಡು ನೂತನ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಎಲ್ಲಾ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಸ್ಪರ್ಧೆ ಯಶಸ್ವಿಯಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಲ| ಸುದರ್ಶನ್ ಪಡಿಯಾರ್ ಮಾತನಾಡಿ ವಿಟಿವಿ ಮಾಧ್ಯಮ ಸಂಸ್ಥೆಯು ಇಂದು ವಿಟ್ಲದ ಒಂದು ಪ್ರಮುಖ ಅಂಗವಾಗಿ ಕಾರ್ಯನಿರ್ವಹಿಸುತ್ತಾ ಇದೆ. ಸಮಾಜದಲ್ಲಿ ನಡೆಯುವ ಎಲ್ಲಾ ಆಗು-ಹೋಗುಗಳನ್ನು ಉತ್ತಮ ರೀತಿಯಲ್ಲಿ ಸಮಾಜಕ್ಕೆ ತಿಳಿಯಪಡಿಸುವ ಕಾರ್ಯ ಮಾಡುತ್ತಿದೆ. ಇಂದು ಪ್ರತೀ ಮನೆ ಮನಗಳಲ್ಲಿ ವಿಟಿವಿ ಉತ್ತಮ ಮಾಧ್ಯಮ ಸಂಸ್ಥೆಯಾಗಿ ಬೆಳೆದು ನಿಂತಿರುವುದು ವಿಟ್ಲದ ಹಿರಿಮೆಯನ್ನು ಹೆಚ್ಚಿಸಿದೆ. ಜೊತೆಗೆ ವಿನೂತನ ಕಾರ್ಯಕ್ರಮ, ಸ್ಪರ್ಧಾಕೂಟಗಳನ್ನು ಆಯೋಜನೆ ಮಾಡಿ ಆ ಮೂಲಕ ಎಲ್ಲರನ್ನೂ ಸಮಾಜದಲ್ಲಿ ಒಗ್ಗೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದೆ, ತಮ್ಮೆಲ್ಲಾ ಕಾರ್ಯವೈಖರಿಗೆ ಶುಭವಾಗಲಿ ಎಂದರು.
ಈ ಸಂದರ್ಭದಲ್ಲಿ ಜಯರಾಮ್ ಬಲ್ಲಾಳ್ ವಿಟ್ಲ ಅರಮನೆ, ರವಿ ವರ್ಮ ವಿಟ್ಲ ಅರಮನೆ, ಮೋಹನ್ ಕಟ್ಟೆ ಹಾಗೂ ವಿಟಿವಿಯ ಸಿಬ್ಬಂಧಿಗಳಾದ ಪ್ರಭಾಕರ್, ಅಶ್ವಿನಿ ಪೆರುವಾಯಿ, ರಾಜೇಶ್ ನಾಯಕ್, ಶೈಲಶ್ರೀ ಸಂದೇಶ್, ಸ್ವರ್ಣಗೌರಿ ಉಪಸ್ಥಿತರಿದ್ದರು.
*“ಜ್ಞಾನದಾಟ – ಮಕ್ಕಳ ಸ್ಪರ್ಧಾ ಕೂಟ” ಸ್ಪರ್ಧೆ*
*ಸ್ಪರ್ಧಾ ವಿಭಾಗಗಳು*
ವಿಭಾಗ 1:- 1 ನೇ ತರಗತಿಯಿಂದ 4 ನೇ ತರಗತಿ
ವಿಭಾಗ 2:- 5 ನೇ ತರಗತಿಯಿಂದ 8 ನೇ ತರಗತಿ
*ಸ್ಪರ್ಧಾ ನಿಯಮಗಳು:*
* ಪ್ರತೀ ವಿಭಾಗದಲ್ಲಿ 03 ಪ್ರಶ್ನೆಗಳಿರುತ್ತವೆ. ಈ ಪುಟದ ಹಿಂಬದಿಯಲ್ಲಿ ಪ್ರಶ್ನೆಗಳನ್ನು ನೀಡಲಾಗಿದೆ. ನಾವು ಸೂಚಿಸಿದ ಸ್ಥಳದಲ್ಲಿ ಉತ್ತರ ಬರೆದು ನಿಮ್ಮ ಹೆಸರು, ತರಗತಿ, ಶಾಲೆಯ ಹೆಸರು, ಮನೆಯ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಬರೆದು ಹಿಂಬದಿ ಪುಟದ ಫೋಟೋವನ್ನು ಮಾತ್ರಾ ನಾವು ನೀಡಿದ ಈ ಮೊಬೈಲ್ ನಂಬರ್ ಗೆ (9187624100) ವಾಟ್ಸಾಪ್ ಮೂಲಕ ಕಳುಹಿಸಬೇಕು.
* ಪ್ರತೀ ವಿಭಾಗದಲ್ಲಿ ಮೊದಲು ಹೆಸರು ನೋಂದಾಯಿಸಿದ 100 ಮಕ್ಕಳ ಮನೆಗೆ ಪುಸ್ತಕ ಹಾಗೂ ವಿಶೇಷ ಉಡುಗೊರೆ ಬಹುಮಾನವಾಗಿ ಬರಲಿದೆ.
*ಎರಡು ವಿಭಾಗಗಳಲ್ಲಿ ನೀಡಿರುವ ಪ್ರಶ್ನೆಗಳಿಗೆ ಸರಿ ಉತ್ತರ ಬರೆದು ಅಂತಿಮ ಸುತ್ತಿಗೆ ಆಯ್ಕೆಯಾದ ಮಕ್ಕಳ ಹೆಸರನ್ನು ಕರೆ ಮಾಡಿ ತಿಳಿಸಲಾಗುವುದು.
* ಬಂಪರ್ ಬಹುಮಾನ ಸ್ಪರ್ಧೆ ನಡೆಯುವ ದಿನದಂದು ಅಂತಿಮ ಸುತ್ತಿಗೆ ಆಯ್ಕೆಯಾದ ಮಕ್ಕಳು ತಮ್ಮ ಪೋಷಕರೊಂದಿಗೆ ಹಾಜರಿದ್ದರೆ ಮಾತ್ರಾ ಅವರ ಹೆಸರನ್ನು ಸ್ಪರ್ಧೆಗೆ ಪರಿಗಣಿಸಿ ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆರಿಸಿ ಬಂಪರ್ ಬಹುಮಾನವನ್ನು ಅಲ್ಲಿಯೇ ನೀಡಲಾಗುವುದು.
* ಅಂತಿಮ ಸುತ್ತಿನ ಸ್ಪರ್ಧೆ ನಡೆಯುವಂದು ಭಾಗವಹಿಸುವ ಮಕ್ಕಳಿಗೆ ಖ್ಯಾತ ಪತ್ರಿಕಾ ವರದಿಗಾರರು ಹಾಗೂ ರಂಗಕರ್ಮಿಗಳು ಒಟ್ಟು ಸೇರಿಕೊಂಡು ಓದಿನಲ್ಲಿ ಆಸಕ್ತಿ ಮೂಡಿಸುವಂತಹ ಸೃಜನಶೀಲ ಚಟುವಟಿಕೆಗಳನ್ನು ಹಾಗೂ FUNNY ಗೇಮ್ಸ್ ನಡೆಸಿ ಬಹುಮಾನವನ್ನು ನೀಡಲಾಗುವುದು.
ಪ್ರತೀ ವಿಭಾಗದಲ್ಲಿ ಮೊದಲು ಹೆಸರು ನೋಂದಾಯಿಸಿದ 100 ಮಕ್ಕಳ ಮನೆ ಬಾಗಿಲಿಗೆ ಆಕರ್ಷಕ ಬಹುಮಾನವನ್ನು ಕಳುಹಿಸಲಾಗುವುದು.
ಪ್ರತೀ ವಿಭಾಗದಲ್ಲಿ ಓರ್ವ ಲಕ್ಕಿ ವಿಜೇತ ವಿದ್ಯಾರ್ಥಿಗೆ Gare Cycle ಬಂಪರ್ ಬಹುಮಾನ ನೀಡಲಾಗುವುದು.
ಈ ಸ್ಪರ್ಧೆಗಳಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9187624100




