ಬಂಟ್ವಾಳ: ರೂಮ್ ನಲ್ಲಿ ಕೂಡಿ ಹಾಕಿ ಹಲ್ಲೆ: ಹಲವರ ವಿರುದ್ಧ FIR ದಾಖಲು
ಬಂಟ್ವಾಳ : ವ್ಯಕ್ತಿಯೋರ್ವರನ್ನು ಪತ್ನಿಯ ಕಡೆಯವರು ಕಾರಿನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ರೂಮ್ ನಲ್ಲಿ ಕೂಡಿ ಹಾಕಿದ್ದು, ಅಲ್ಲಿಂದ ತಪ್ಪಿಸಿಕೊಂಡು ಬಂದಿರುವುದಾಗಿ ನೀಡಿರುವ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ನಿವಾಸಿ ನೌಷಾದ್ ನೀಡಿರುವ ದೂರಿನ ಮೇರೆಗೆ ಜುನೈದ್, ಇದ್ದಿಮೋನು, ಕಲಂದರ, ತಮೀಮ್, ಜುನೈದ್, ಮಸ್ಸೂರು, ಇಮ್ಮಿಯಾಜ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ನೌಷಾಧ್ ನ.6 ರಂದು ರಾತ್ರಿ ಸ್ಕೂಟರ್ ನಲ್ಲಿ ತುಂಬೆ ಜಂಕ್ಷನ್ ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಕಾರನ್ನು ಅದರ ಚಾಲಕ ನೌಷಾಧ್ ಸ್ಕೂಟರ್ ಗೆ ಅಡ್ಡ ನಿಲ್ಲಿಸಿ, ಅದರೊಳಗಿನಿಂದ ನೌಷಾಧ್ ಪತ್ನಿಯ ಕಡೆಯ ಜುನೈದ್ ಹಾಗೂ ಇತರರು ಬಂದು ನಿನ್ನ ಪತ್ನಿಯ ವಿಷಯದಲ್ಲಿ ಮಾತನಾಡಲು ಇದೆ ಕಲಾಯಿ ಮನೆಗೆ ಬರುವಂತೆ ತಿಳಿಸಿ ಒತ್ತಾಯದಿಂದ ಬಂದ ಕಾರಿನಲ್ಲಿ ಕುಳ್ಳಿರಿಸಿ, ನೌಷಾಧ್ ಹೆಂಡತಿಯ ಅಣ್ಣ ಇದ್ದಿಮೋನು ರವರ ಮನೆಗೆ ಕರೆದುಕೊಂಡು ಹೋಗಿರುತ್ತಾರೆ.
ಅಲ್ಲಿ ಕಲಂದರ ಹಾಗೂ ತಮೀಮ್ ಎಂಬವರುಗಳು ನೌಷಾಧ್ ಗೆ ಕೈಯಿಂದ ಹಲ್ಲೆ ನಡೆಸಿದ್ದು, ಬಳಿಕ ಸದ್ರಿ ಕಾರಿನಲ್ಲಿ ನೌಷಾಧ್ ರನ್ನು ಬಲವಂತವಾಗಿ ಕೂರಿಸಿ ಅಲ್ಲಿಂದ ಅಡ್ಡೂರಿನಲ್ಲಿರುವ ಹೆಂಡತಿಯ ಅಣ್ಣ ಯಾಕೂಬ್ ರವರ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಅವರ ಮಕ್ಕಳಾದ ಜುನೈದ್, ಮನ್ಸೂರು, ಇಮ್ಮೀಯಾಜ್ ಹಾಗೂ ಸ್ನೇಹಿತರು ಮರದ ದೊಣ್ಣೆಯಿಂದ ಹಲ್ಲೆ ಮಾಡಿ, ಜುನೈದ್ ಎಂಬಾತನು ನೌಷಾಧ್ ಗೆ ಅವ್ಯಾಚವಾಗಿ ಬೈದು, ಜೀವಬೆದರಿಕೆ ಹಾಕಿ ರೂಮಿನಲ್ಲಿ ಕೂಡಿ ಹಾಕಿರುತ್ತಾರೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಬಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ:- 132/2023 ಕಲಂ: 363, 323, 504, 324, 341, 342, 506 ಜೊತೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.





