April 10, 2026

ಪರ್ಲಡ್ಕ-ಕಲ್ಲಿಮಾರು: ರಸ್ತೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ: ವಾಹನ ಸಂಚಾರ ಸಂಪೂರ್ಣ ಬಂದ್

0
image_editor_output_image-412659160-1699512944335.jpg

ಪುತ್ತೂರು: ಪುತ್ತೂರು ನಗರದ ಪರ್ಲಡ್ಕ ಕಲ್ಲಿಮಾರು ಎಂಬಲ್ಲಿ ಬೃಹತ್ ಗಾತ್ರದ ಮರ ರಸ್ತೆ ಅಡ್ಡಲಾಗಿ ಬಿದ್ದು, ರಸ್ತೆ ಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆದ ಘಟನೆ ನಡೆದಿದೆ.

ಕರಾವಳಿಯಲ್ಲಿ ಹಿಂಗಾರು ಮಳೆ ಅಬ್ಬರ ಮುಂದುವರೆದಿದ್ದು, ಹಲವೆಡೆ ಮಳೆ ಹಾನಿಯಾಗಿದೆ. ನಿರಂತರ ಹಿಂಗಾರು ಮಳೆಯಿಂದಾಗಿ ಪುತ್ತೂರಿನ ಪರ್ಲಡ್ಕ ಕಲ್ಲಿಮಾರು ಎಂಬಲ್ಲಿ ಬೃಹತ್ ಗಾತ್ರದ ಮರ ರಸ್ತೆ ಅಡ್ಡಲಾಗಿ ಬಿದ್ದು, ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದೆ.

ಸದ್ಯ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ನಿರತರಾಗಿದ್ದು, ಕಳೆದ 1 ಗಂಟೆಯಿಂದ ಕಾರ್ಯಾಚರಣೆ ನಡೆಯುತ್ತಿದೆ, ಬೃಹತ್ ಮರ ಹಿನ್ನಲೆ ಕಾರ್ಯಾಚರಣೆ ವಿಳಂಬವಾಗುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!