ಬಂಟ್ವಾಳ: ಜಲ್ಲಿ ಸಾಗಾಟದ ಟಿಪ್ಪರ್ ಢಿಕ್ಕಿ- ಕಾರು ಜಖಂ
ಬಂಟ್ಬಾಳ: ಕಾರೊಂದಕ್ಕೆ ಜಲ್ಲಿ ಸಾಗಾಟದ ಟಿಪ್ಪರ್ ವೊಂದು ಢಿಕ್ಕಿ ಹೊಡೆದ ಕಾರು ಜಖಂಗೊಂಡ ಘಟನೆ ಬಂಟ್ವಾಳ ಸಮೀಪದ ಲೊರೆಟ್ಟೋ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೈಸೂರು ಮೂಲದ ಕೃಷ್ಣ ಅರಸ ಎಂಬವರ ಕಾರಿಗೆ ಕೆ.ಎನ್.ಆರ್.ಸಿ. ಕಂಪೆನಿಗೆ ಸೇರಿರುವ ಟಿಪ್ಪರ್ ಢಿಕ್ಕಿಯಾಗಿದೆ. ಕೃಷ್ಣ ಅರಸರ ಮಗಳು ಮೂಡುಬಿದಿರೆಯ ಅಳ್ವಾಸ್ ಕಾಲೇಜಿನಲ್ಲಿ ಕಲಿಯುತ್ತಿದ್ದು ಈ ಹಿನ್ನೆಲೆಯಲ್ಲಿ ಅವರು ಮೂಡುಬಿದಿರೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕೆ.ಎನ್.ಆರ್.ಸಿ.ಕಂಪೆನಿಗೆ ಸೇರಿದ ಟಿಪ್ಪರ್ ಅತೀ ವೇಗದಿಂದ ಬಂದು ಎದುರಿನಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಘಟನೆಯಲ್ಲಿ ಕಾರು ಚಾಲಕ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.





