ಬೆಳ್ತಂಗಡಿ: ಬಾವಿಯಲ್ಲಿ ಮಹಿಳೆಯ ಮೃತದೇಹ ಪತ್ತೆ, ಪತಿಯ ಬಂಧನ
ಬೆಳ್ತಂಗಡಿ: ಬೆಳಾಲು ಗ್ರಾಮದ ಮಾಚಾರಿನ ಕೆಂಚನೊಟ್ಟು ಎಂಬಲ್ಲಿ ವಿವಾಹಿತ ಮಹಿಳೆಯ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ನ. 3 ರಂದು ಪತ್ತೆಯಾದ ಘಟನೆಗೆ ಸಂಬಂಧಿಸಿ ಪತಿಯೇ ಕೊಲೆಗೈದು ಬಾವಿಗೆ ತಳ್ಳಿರುವ ವಿಚಾರ ದೃಢಪಟ್ಟಿದೆ.
ಮಾಚಾರು ಕೆಂಪನೊಟ್ಟು ನಿವಾಸಿ ಶಶಿಕಲಾ (25) ಮೃತಪಟ್ಟ ಮಹಿಳೆ. ಶಶಿಕಲಾ ಪತಿ ಸುಧಾಕರ ನಾಯ್ಕ (31)ನನ್ನು ಬಂಧಿಸಲಾಗಿದ್ದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಮೇಲ್ನೋಟಕ್ಕೆ ಅನೈತಿಕ ಸಂಬಂಧ ವಿಚಾರದಲ್ಲಿ ಪತ್ನಿ ಜತೆ ಜಗಳವಾಡಿದ್ದು ಇದೇ ವಿಚಾರದಲ್ಲಿ ಕೋಪದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ ಬಾವಿಗೆ ತಳ್ಳಿ ಕುಟುಂಬದವರಿಗೆ ಹಾಗೂ ಧರ್ಮಸ್ಥಳ ಪೊಲೀಸರಿಗೆ ಆತ್ಮಹತ್ಯೆ ನಾಟಕವಾಡಿದ್ದ.
ಕೊನೆಗೆ ಘಟನಾ ಸ್ಥಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದಾಗ ಪೊಲೀಸರು ಪತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ವಿಚಾರ ಬಾಯಿಬಿಟ್ಟಿದ್ದಾನೆ.





