May 13, 2026

ನಟಿ ಹುಮೈರಾ ಹಿಮು ನಿಗೂಢ ಸಾವು

0
image_editor_output_image-1207869326-1699149521666.jpg

ಡಾಕಾ: ಬಾಂಗ್ಲಾದೇಶದ ನಟಿ ಹುಮೈರಾ ಹಿಮು ನಿಗೂಢವಾಗಿ ಸಾವನಪ್ಪಿದ್ದು, ಇದೀ ಪ್ರಕರಣದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

37 ನಟಿ ಹುಮೈರಾ ಹಿಮು ಅವರು ಗುರುವಾರ ಉತ್ತರಾದಲ್ಲಿನ ತಮ್ಮ ಫ್ಲಾಟ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಢಾಕಾದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಹುಮೈರಾ ಅವರ ಕುತ್ತಿಗೆಯಲ್ಲಿ ಕೆಲವು ಗಾಯಗಳನ್ನು ನೋಡಿದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರು. ನಟಿಯನ್ನು ಆಸ್ಪತ್ರೆಗೆ ಕರೆತಂದ ಯುವಕ ಆಕೆಯ ಸಾವಿನ ಬಗ್ಗೆ ಮಾಹಿತಿ ನೀಡುವ ಮೊದಲೇ ಪರಾರಿಯಾಗಿದ್ದ ಎಂದು ಹೇಳಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಜಿಯಾವುದ್ದೀನ್‌ನನ್ನು ಬಂಧಿಸಲಾಗಿದೆ.

ಆಸ್ಪತ್ರೆಯಲ್ಲಿದ್ದ ವ್ಯಕ್ತಿಯೇ ಈತ ಎಂದು ಪೊಲೀಸರು ಸ್ಪಷ್ಟಪಡಿಸಿಲ್ಲ. ವೈದ್ಯರು ಸಾವನ್ನು ಖಚಿತಪಡಿಸುವ ಮುನ್ನವೇ ಯುವಕ ಸ್ಥಳದಿಂದ ತೆರಳಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!