ಕಾಸರಗೋಡು: ದೋಣಿಯಿಂದ ನದಿಗೆ ಬಿದ್ದು ಓರ್ವ ನಾಪತ್ತೆ
ಕಾಸರಗೋಡು: ದೋಣಿಯಿಂದ ನದಿಗೆ ಬಿದ್ದು ಓರ್ವ ನಾಪತ್ತೆಯಾದ ಘಟನೆ ಮಂಗಳವಾರ ತಡರಾತ್ರಿ ಚಂದ್ರಗಿರಿ ಹೊಳೆ ಯಲ್ಲಿ ನಡೆದಿದೆ.
ಮೇಲಂಗೋಡು ನಿವಾಸಿ ಮಜೀದ್ (50) ನಾಪತ್ತೆಯಾದವರು. ಮೂವರು ಸ್ನೇಹಿತರ ಜೊತೆ ದೋಣಿಗೆ ಹತ್ತಿದ್ಯು, ಸ್ವಲ್ಪ ಮುಂದಕ್ಕೆ ಸಾಗುತ್ತಿದ್ದಂತೆ ದೋಣಿಯಿಂದ ನದಿಗೆ ಬಿದ್ದು ನೀರುಪಾಲಾಗಿದ್ದಾರೆ.
ಉಳಿದ ಮೂವರು ದಡ ಸೇರಿದ ಬಳಿಕ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಶೋಧ ಕಾರ್ಯ ಮುಂದುವರಿದ್ದು, ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ಪರಿಸರ ವಾಸಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.”





