March 21, 2026

ಹುಲಿ ಉಗುರಿನ ಲಾಕೆಟ್‌: ಇಬ್ಬರು ಅರ್ಚಕರ ಬಂಧನ

0
image_editor_output_image1902524907-1698303587554.jpg

ಚಿಕ್ಕಮಗಳೂರು: ಹುಲಿ ಉಗುರಿನ ಲಾಕೆಟ್‌ ಹೊಂದಿದ್ದ ಇಬ್ಬರು ಅರ್ಚಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಖಾಂಡ್ಯ ಗ್ರಾಮದ ಮಾರ್ಕಂಡೇಶ್ವರ ದೇವಾಲಯದ ಅರ್ಚಕರಾದ ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ್ ಬಂಧಿತರು. ಅವರಿಂದ ಹುಲಿ ಉಗುರಿನ ಮೂರು ಲಾಕೆಟ್ ವಶಕ್ಕೆ ಪಡೆಯಲಾಗಿದೆ.

ಇ–ಮೇಲ್ ಮೂಲಕ ಅರಣ್ಯ ಇಲಾಖೆಗೆ ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದು, ಇಬ್ಬರು ಅರ್ಚಕರ ಬಳಿ ಹುಲಿ ಉಗುರಿನ ಲಾಕೆಟ್‌ ಇರುವುದಾಗಿ ತಿಳಿಸಿದ್ದರು. ಇಬ್ಬರ ಮನೆಗೂ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದಾಗ ಹುಲಿ ಉಗುರಿರುವ ಮೂರು ಲಾಕೆಟ್‌ಗಳು ದೊರೆತಿವೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!