May 14, 2026

ಬಾಯಿಯಿಂದ ಬೆಂಕಿ ಉಗುಳುವ ಸಾಹಸ: ಹುಲಿ ವೇಷದಾರಿಯ ಟೋಪಿಗೆ ಹತ್ತಿಕೊಂಡ ಬೆಂಕಿ

0
image_editor_output_image1107453151-1698301070594.jpg

ಮಂಗಳೂರು: ಕೆಎಸ್ ರಾವ್ ರಸ್ತೆಯ ಸಿಟಿಸೆಂಟರ್ ಬಳಿ ಹುಲಿ ವೇಷಧಾರಿಯೊಬ್ಬರು ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡಲು ಹೋಗಿ ಅವರ ಹುಲಿ ಟೋಪಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ಸದ್ಯ ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗಳೂರಿನ ಕೆಎಸ್ ರಾವ್ ರಸ್ತೆಯ ಸಿಟಿಸೆಂಟರ್ ಈ ಘಟನೆ ನಡೆದಿದ್ದು, ನೆರೆದ ಜನಸಮೂಹದ ಮುಂದೆ ಬೆಂಕಿ ಸಾಹಸ ಮಾಡಲು ಹುಲಿ ವೇಷದಾರಿ ಮುಂದಾಗಿದ್ದು.

ಹುಲಿ ವೇಷಧಾರಿ ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡುತ್ತಿದ್ದ ವೇಳೆ ಅವರ ಟೋಪಿಗೆ ಬೆಂಕಿ ಹಿಡಿದ ಘಟನೆ ನಡೆಯಿತು.

ಕೂಡಲೇ ಅವರು ತಲೆಯಿಂದ ಟೊಪ್ಪಿಯನ್ನು ತೆಗೆದು ಹಾಕಿದ್ದು, ಅಪಘಢ ತಪ್ಪಿದೆ.

Leave a Reply

Your email address will not be published. Required fields are marked *

error: Content is protected !!