November 22, 2024

4 ಕೋಟಿ ರೂಪಾಯಿ ಮೌಲ್ಯದ ಐಫೋನ್‍ಗಳ ವಶ: ಅಬುಧಾಬಿಯಿಂದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೂವರು ಪ್ರಯಾಣಿಕರ ಬಂಧನ

0

ಪಣಜಿ : ಅಬುಧಾಬಿಯಿಂದ ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೂವರು ಪ್ರಯಾಣಿಕರಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ಐಫೋನ್‍ಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡಿದೆ.

ಉತ್ತರ ಪ್ರದೇಶದ ಪ್ರಯಾಣಿಕರಾದ ಇರ್ಫಾನ್ (30), ಮುಂಬೈನ ಕಮ್ರಾನ್ ಅಹ್ಮದ್ (38) ಮತ್ತು ಗುಜರಾತ್‍ನ ಮೊಹಮ್ಮದ್ ಇರ್ಫಾನ್ ಗುಲಾಮ್ (37) ಅವರನ್ನು ಉತ್ತರ ಗೋವಾದ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆ ತಡೆ ಸಂಸ್ಥೆ ಬಂಧಿಸಿದೆ ಎಂದು ಡಿಆರ್‍ಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೋಧದ ವೇಳೆ, ಮೂವರಿಂದ ಒಟ್ಟು 3.92 ಕೋಟಿ ರೂಪಾಯಿ ಮೌಲ್ಯದ ಪೇಸ್ಟ್ ರೂಪದಲ್ಲಿ 5.7 ಕೆಜಿ ಚಿನ್ನ ಮತ್ತು 28 ಅತ್ಯಾಧುನಿಕ ಐಫೋನ್ 15 ಪ್ರೊ ಮ್ಯಾಕ್ಸ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಆರೋಪಿಗಳು ಮುಂಬೈ ಮತ್ತು ದುಬೈ ನಡುವೆ ಕಾರ್ಯನಿರ್ವಹಿಸುತ್ತಿರುವ ಕಳ್ಳಸಾಗಾಣಿಕೆ ಜಾಲದ ಭಾಗವಾಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಬಂಧಿತ ಆರೋಪಿಗಲು ಕಳೆದ ಅ. 12 ರಂದು ಮುಂಬೈನಿಂದ ಅಬುಧಾಬಿಗೆ ಪ್ರಯಾಣಿಸಿದರು ಮತ್ತು ಕಳೆದ ಶನಿವಾರ ರಾತ್ರಿ ಭಾರತಕ್ಕೆ ಗೋವಾ ವಿಮಾನ ನಿಲ್ದಾಣದಲ್ಲಿ ಇಳಿದು ಕಳ್ಳಸಾಗಾಣಿಕೆ ಸರಕುಗಳೊಂದಿಗೆ ಪರಾರಿಯಾಗಲು ಪ್ರಯತ್ನಿಸಿದರು.

ಚೆಕ್-ಇನ್ ಬ್ಯಾಗೇಜ್‍ನಲ್ಲಿ ಇರಿಸಲಾದ ಪ್ಯಾಕೆಟ್‍ಗಳಲ್ಲಿ ಐಫೋನ್‍ಗಳನ್ನು ಸುತ್ತಿಡಲಾಗಿತ್ತು ಮತ್ತು ಇಬ್ಬರು ಪ್ರಯಾಣಿಕರ ಸೊಂಟದ ಪಟ್ಟಿಯಲ್ಲಿ ಚಿನ್ನದ ಪೇಸ್ಟ್ ಅನ್ನು ಮರೆಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!