May 10, 2026

ಬೆಳ್ತಂಗಡಿ: ಮನೆಗೆ ಟಿವಿ ನೋಡಲು ಬಂದ ಬಾಲಕಿಯ ಅತ್ಯಾಚಾರ: ಆರೋಪಿ ಸುಧೀರ್ ಗೆ 20 ವರ್ಷ ಜೈಲು ಶಿಕ್ಷೆ

0
image_editor_output_image-267262905-1732257128835.jpg

ಮಂಗಳೂರು: 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50,000 ರೂ.ಗಳ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಪೋಕ್ಸೋ) ತೀರ್ಪು ನೀಡಿದೆ.

ಬೆಳ್ತಂಗಡಿ ತಾಲೂಕಿನ ಕೆ ಸುಧೀರ್ ಎಂಬಾತನೇ ಶಿಕ್ಷೆಗೊಳಗಾದ ಆರೋಪಿ. ಡಿಸೆಂಬರ್ 2021ರಲ್ಲಿ ಆರೋಪಿ ಮನೆಗೆ ಟಿವಿ ನೋಡಲು ಬಂದ ಸಂತ್ರಸ್ತ ಬಾಲಕಿಯನ್ನು ಮನೆಯಿಂದ ಸ್ವಲ್ಪ ದೂರದಲ್ಲಿ ಅಜ್ಜಿಯ ಮನೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ, ಬಳಿಕ ಬಾಲಕಿಯೇ ಸ್ವ ಇಚ್ಚೆಯಿಂದ ಬಂದಿದ್ದಾಳೆ ಎಂದು ಮನೆಯವರಿಗೆ ಹೇಳಿದ್ದ ಆರೋಪಿ ಬೆದರಿಕೆ ಕೂಡ ಹಾಕಿದ್ದ ಬಳಿಕ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ.

ಆಗಸ್ಟ್ 2022 ರಲ್ಲಿ, ಹುಡುಗಿ ಗರ್ಭಿಣಿಯಾಗಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಸಂತ್ರಸ್ಥೆಯ ಮನೆಯವರಿಗೆ ನಾನು ಆಕೆಯನ್ನು ಮದುವೆಯಾಗುತ್ತೇನೆ ಎಂದು ಹೇಳಿ, ಆಕೆಗೆ ಬೆಳ್ಳಿಯ ಕರಿಮಣಿ , ಕಾಲುಂಗುರ ತೊಡಿಸಿ, ಪೋಟೋ ತೆಗೆದಿದ್ದಾನೆ. ಬಳಿಕ ಹುಟ್ಟುಹಬ್ಬದ ಪಾರ್ಟಿ ಇದೆ ಎಂದು ಸಂತ್ರಸ್ತ ಬಾಲಕಿಯನ್ನು ಚಿಕ್ಕಮಗಳೂರಿಗೆ ಕರೆದೊಯ್ದಿದ್ದಾನೆ. ಅಲ್ಲಿ ಆಸ್ಪತ್ರೆಯೊಂದರಲ್ಲಿ ಈಕೆ ನನ್ನ ಪತ್ನಿ ಎಂದು ಹೇಳಿ, ಆಕೆಯ ಗರ್ಭಪಾತ ಮಾಡಿಸಿದ್ದಾನೆ.

Leave a Reply

Your email address will not be published. Required fields are marked *

error: Content is protected !!