ಪಾಣೆಮಂಗಳೂರು: ಯಶಸ್ವಿಯಾಗಿ ನಡೆದ ಸಯ್ಯಿದ್ ಅಲೀ ಬಾಫಖೀ ತಂಙಳ್ ಅನುಸ್ಮರಣಾ ಸಂಗಮ
ಮಂಗಳೂರು: ಇತ್ತೀಚೆಗೆ ನಮ್ಮನ್ನಗಲಿದ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಹಾಗೂ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಮೀನುಶ್ಶರೀಅ ಸಯ್ಯಿದ್ ಅಲೀ ಬಾಫಖೀ ತಂಙಳ್ ರವರ ಅನುಸ್ಮರಣಾ ಸಂಗಮವು ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಸುನ್ನೀ ಮೆನೇಜ್ ಮೆಂಟ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಸಮಿತಿಗಳ ಜಂಟಿ ಆಶ್ರಯದಲ್ಲಿ ಪಾಣೆಮಂಗಳೂರಿನ ಸಾಗರ ಆಡಿಟೋರಿಯಂ ನಲ್ಲಿ ನಡೆಯಿತು.

ಎಸ್.ಎಂ.ಎ ರಾಜ್ಯ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಕೊಡುಂಗಾಯಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.ಸಯ್ಯಿದ್ ಅಲೀ ಬಾಫಖೀ ತಂಙಳ್ ರವರ ಸುಪುತ್ರ ಸಯ್ಯಿದ್ ಇಬ್ರಾಹಿಂ ಬಾಫಖೀ ತಂಙಳ್ ಕೊಯಿಲಾಂಡಿಯವರು ದುಆಕ್ಕೆ ನೇತೃತ್ವ ನೀಡಿದರು. ಎಸ್.ಜೆ.ಎಂ ರಾಜ್ಯಾಧ್ಯಕ್ಷ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಸಭೆಯನ್ನು ಉದ್ಘಾಟಿಸಿದರು.
ಎಸ್.ಎಂ.ಎ ಕೇರಳಂ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ರವರು ಅನುಸ್ಮರಣಾ ಪ್ರಭಾಷಣ ನಡೆಸಿದರು.
ಸಯ್ಯಿದ್ ಚಟ್ಟೆಕಲ್ ತಂಙಳ್,ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಸಯ್ಯಿದ್ ಶರಫುದ್ದೀನ್ ತಂಙಳ್,ಉಮರ್ ಮದನಿ ಪಾಲಕ್ಕಾಡ್, ಚೆರೂಪ ಬಶೀರ್ ಮುಸ್ಲಿಯಾರ್ ಕೋಝಿಕ್ಕೋಡ್, ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಶಾಫಿ ಸಅದಿ ಬೆಂಗಳೂರು,ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್, ರಾಜ್ಯ ಎಸ್.ವೈ.ಎಸ್ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮೋಂಟುಗೋಳಿ, ಎಸ್.ಜೆ.ಎಂ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಕೆ.ಕೆ.ಎಂ.ಕಾಮಿಲ್ ಸಖಾಫಿ ಸುರಿಬೈಲು, ಹಾಫಿಲ್ ಮುಹಮ್ಮದ್ ಹನೀಫ್ ಮಿಸ್ಬಾಹಿ, ಬಶೀರ್ ಅಹ್ಮದ್ ಪಂಜಿಮೊಗರು, ಎಂ.ಬಿ.ಸಾದಿಕ್ ಮಲೆಬೆಟ್ಟು, ಎನ್.ಎಸ್. ಉಮರ್ ಮಾಸ್ಟರ್, ಇಬ್ರಾಹೀಂ ನಈಮಿ, ಮಲ್ಲೂರು ಅಶ್ರಫ್ ಸಅದಿ, ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್, ಅಶ್ರಫ್ ಸಖಾಫಿ ಮೂಡಡ್ಕ, ಇಬ್ರಾಹೀಂ ಬೀಡು, ಮೂಸ ಹಾಜಿ, ಕೊಳಕೆ ಅಬ್ದುಲ್ ರಝಾಕ್ ಸಖಾಫಿ, ಯಅಖೂಬ್ ಲತೀಫಿ, ಕುಕ್ಕಾಜೆ ಅಬೂಬಕರ್ ಮುಸ್ಲಿಯಾರ್ ಮುಂತಾದ ಹಲವು ಗಣ್ಯರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಎಸ್.ಜೆ.ಎಂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮದನಿ ಪೂಡಲ್ ಸ್ವಾಗತಿಸಿ ಕೊನೆಯಲ್ಲಿ ಇಸ್ಮಾಯಿಲ್ ಸಅದಿ ಉರುಮಣೆ ಧನ್ಯವಾದ ಅರ್ಪಿಸಿದರು. ಅಬ್ದುಲ್ ಅಝೀಝ್ ನೂರಾನಿ ಕಾರ್ಯಕ್ರಮ ನಿರೂಪಿಸಿದರು.




