May 11, 2026

ಹುಟ್ಟುಹಬ್ಬದ ಪಾರ್ಟಿ ವೇಳೆ ಆಕಸ್ಮಿಕವಾಗಿ ಗುಂಡು ತಗಲಿ ವಿದ್ಯಾರ್ಥಿ ಸಾವು

0
image_editor_output_image-137216952-1732265836609.jpg

ವಾಷಿಂಗ್ಟನ್‌: ಹುಟ್ಟುಹಬ್ಬದ ಪಾರ್ಟಿ ವೇಳೆ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿದ ಪರಿಣಾಮ ತೆಲಂಗಾಣದ ವರ್ಷದ ವಿದ್ಯಾರ್ಥಿಯೊಬ್ಬ ಅಮೆರಿಕದಲ್ಲಿ ಸಾವಿಗೀಡಾಗಿದ್ದಾನೆ.

ಮೃತ ಯುವಕನನ್ನು ತೆಲಂಗಾಣದ ಉಪ್ಪಲ್ ಮೂಲದ ಆರ್ಯನ್ ರೆಡ್ಡಿ ಎಂದು ಗುರುತಿಸಲಾಗಿದೆ. ಆತ ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ. ನ.13 ರಂದು ಈ ಘಟನೆ ನಡೆದಿದ್ದು, ಮೃತದೇಹ ಇಂದು ರಾತ್ರಿ (ಶುಕ್ರವಾರ) ತೆಲಂಗಾಣಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!