May 11, 2026

ಮಡಿಕೇರಿ: 4 ಮಕ್ಕಳನ್ನು ಹೆರುವ ಪೋಷಕರಿಗೆ 1 ಲಕ್ಷ ರೂ. ಬಹುಮಾನ: ವಿಶೇಷ ಆಫರ್ ಘೋಷಿಸಿದ ಕೊಡವ ಸಮಾಜ

0
image_editor_output_image-1632546158-1732258124970.jpg

ಮಡಿಕೇರಿ: ಜಿಲ್ಲೆಯಲ್ಲಿ ಕೊಡವರ ಜನಸಂಖ್ಯೆ ಹೆಚ್ಚಿಸಲು ಕೊಡವ ಸಮಾಜ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವ ಪೋಷಕರಿಗೆ 25,000 ರೂ.ನಿಂದ 1 ಲಕ್ಷ ರೂ. ವರೆಗೆ ಬಹುಮಾನ ನೀಡುವ ಆಫರ್‌ವೊಂದನ್ನು ಪ್ರಕಟಿಸಿದೆ.

ಕೊಡಗು ಜಿಲ್ಲೆ ಅತಿ ವಿಶಿಷ್ಟ ಸಂಸ್ಕೃತಿ, ಪರಂಪರೆಗೆ ಹೆಸರಾದ ಜಿಲ್ಲೆ. ಇಲ್ಲಿನ ಕೊಡವ ಸಂಸ್ಕೃತಿ ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಹಾಗಾಗಿಯೇ ಸಾಂಸ್ಕೃತಿಕವಾಗಿ ಕೊಡಗು ಜಿಲ್ಲೆ ಅತಿಸೂಕ್ಷ್ಮ ಪ್ರದೇಶ ಎಂದು ಗುರುತಿಸಿಕೊಂಡಿದೆ. ಆದ್ರೆ ಇತ್ತೀಚಿನ ವರ್ಷಗಳಿಂದ ಕೊಡವರು ಸಾಂಸ್ಕೃತಿಕವಾಗಿ ಅಧಃಪತನದತ್ತ ಸಾಗುತ್ತಿದ್ದಾರೆ ಅನ್ನೋ ಆತಂಕ ಜನರನ್ನ ಕಾಡುತ್ತಿದೆ.

ಕೆಲವರು ತಮ್ಮ ಉದ್ಯೋಗಕ್ಕಾಗಿ ದೂರದ ಊರಿಗೆ ತೆರಳಿ ಅಲ್ಲೇ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಜೊತೆಗೆ ಒಂದೇ ಮಗು ಸಾಕು ಅಂತ ನಿರ್ಬಂಧ ಹಾಕಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಹಬ್ಬ ಹರಿದಿನಗಳಿಗೆ ಬರುವ ಕೊಡವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೊಂದು ದಿನ ಕೊಡವರು ಬೆರಳೆಣಿಕೆ ಸಂಖ್ಯೆಗೆ ಇಳಿದರೂ ಅಚ್ಚರಿ ಇಲ್ಲ. ಹಾಗಾಗಿ ಜಿಲ್ಲೆಯ ವಿವಿಧ ಊರುಗಳಲ್ಲಿರುವ ತಮ್ಮ ಸಮಾಜದವರು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವಂತೆ ಆಫರ್‌ವೊಂದನ್ನ ಕೊಡವ ಸಮಾಜ ನೀಡಿದೆ.

Leave a Reply

Your email address will not be published. Required fields are marked *

error: Content is protected !!