ಸುನ್ನಿ ಮ್ಯಾನೇಜ್ಮೆಂಟ್ ಅಸೋಶಿಯೇಶನ್ ಲೀಡ್ ಎನ್ ಗೈಡ್ 21 ರಿಜಿನಲ್ ಝೋನಲ್ ಪದಾಧಿಕಾರಿಗಳ ಸಮಾವೇಶ
ಉಪ್ಪಿನಂಗಡಿ: ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್ಎಂಎ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ‘ಮುನ್ನಡೆಸು ಮತ್ತು ತರಬೇತಿ ನೀಡು’ ಲೀಡ್ ಅಂಡ್ ಗೈಡ್ 2021 ರೀಜಿನಲ್ ಹಾಗೂ ಝೋನಲ್ ಪದಾಧಿಕಾರಿಗಳ ಸಮಾವೇಶ ಇಂದು ಉಪ್ಪಿನಂಗಡಿ ಎಚ್ ಎಂ ಆಡಿಟೋರಿಯಂ ನಲ್ಲಿನಡೆಯಿತು.
ಸಮಾವೇಶದ ಅಧ್ಯಕ್ಷತೆಯನ್ನು ಈಸ್ಟ್ ಜಿಲ್ಲಾ ಸಮಿತಿ ಅಧ್ಯಕ್ಷ ಸೈಯದ್ ಸಾದಾತ್ ತಂಗಳ್ ಕರುವೇಲು ವಹಿಸಿ ಸಭಾಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಉದ್ಘಾಟಿಸಿದರು.
ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮದನಿ ಜಪ್ಪು ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ನಿರ್ವಹಿಸಿದರು.
ಸಮಾವೇಶದ ವಿಷಯ ಮಂಡನೆಯ ಬಗ್ಗೆ ಮಾತನಾಡಿದ ಎಸ್ ಎಂ ಎ ಸಮಿತಿ ಮುಖಂಡ ಅಬ್ದುಲ್ ಕಾದರ್ ಸಕಾಫಿ ಕಾಟಿಪ್ಪಾರ ಜಿಲ್ಲಾ, ಝೋನಲ್ ರಿಜಿನಲ್ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳು ಸಂಘಟನೆಯನ್ನು ಮುನ್ನಡೆಸಲು ಯಾವ ರೀತಿಯಲ್ಲಿ ಸನ್ನದ್ದ ರಾಗಿರಬೇಕು, ಕಾರ್ಯಕರ್ತರನ್ನು ಯಾವ ರೀತಿಯಲ್ಲಿ ಮುನ್ನಡೆಸಬೇಕೆಂಬ ಮಾಹಿತಿ ನೀಡಿದರು.
ರಾಜ್ಯ ಸಮಿತಿ ಕಾರ್ಯದರ್ಶಿ ಆಶ್ರಫ್ ಸಕಾಫಿ ಮೂಡಡ್ಕಮಾತನಾಡಿ ಎಸ್ ಎಂ ಎ ಪದಾಧಿಕಾರಿಗಳು ಮದರಸ ಪ್ರಸ್ತಾವನಗಳ ಅಭಿವೃದ್ಧಿಗೆ ನಡೆಸಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಸಮಿತಿ ಉಪಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡುಂಗೈ ಅಭಿನಂದನಾ ಭಾಷಣ ನೆರವೇರಿಸಿ ಸಂಘಟನೆಯ ಮಹತ್ವದ ಬಗ್ಗೆ ಮತ್ತು ಸಮಿತಿಯ ಪ್ರತಿಯೊಬ್ಬರ ಜವಾಬ್ದಾರಿಯ ಕುರಿತು ವಿವರಿಸಿದರು.
ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಖಾದರ್ ಹಾಜಿ ಮಿತ್ತಬೈಲು, ನಿರ್ವಹಣಾ ಸಮಿತಿ ಚೇರ್ಮೆನ್ ಎ ಕೆ ಅಹಮದ್, ಈಸ್ಟ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲ್ ವೇಣೂರು, ಮುಖಂಡರುಗಳಾದ ಅಬ್ದುಲ್ ರಹಮಾನ್ ಹಾಜಿ ಅರಿಯಡ್ಕ, ಮಹಮ್ಮದ್ ಹಾಜಿ ಉಪ್ಪಿನಂಗಡಿ, ಯೂಸುಫ್ ಹಾಜಿ, ಇಶಾಕ್ ಹಾಜಿ, ಅಬ್ಬಾಸ್ ಮದನಿ, ಮಹಮ್ಮದ್ ಕಾಜೂರು, ಅಬ್ದುಲ್ಲಾ ಅಹಸನಿ, ಅಶ್ರಫ್ ಹಿಮಮಿ, ಸಿರಾಜುದ್ದೀನ್ ಸಖಾಫಿ, ಅಶ್ರಫ್ ಮರ್ರಡ್ಕ, ಕಾಸಿಂ saqafi ವಿಟ್ಲ, ಶರೀಫ್ ಸಹದಿ, ಹಮೀದ್ ಮುಂಡಾಜೆ, ನಾಸಿರ್ ಸಹದಿ,ಬದ್ರುದ್ದೀನ್ ಲತಿಫಿ,ಅಶ್ರಫ್ ಸಖಾಫಿ ಕನ್ಯಾನ, ಇಸ್ಮಾಯಿಲ್ ಪಡಿಪಿನಂಗಡಿ, ಬಶೀರ್ ಮದನಿ, ಉಮ್ಮರ್ ಸೀಗೆಯಡಿ, ಜಮಾಲುದ್ದೀನ್ ಲತಿಫಿ, ಹಸೈನಾರ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಈಸ್ಟ್ ಜಿಲ್ಲಾ ಸಮಿತಿಯ ರೀಜಿನಲ್ ಹಾಗೂ ಜೋನಲ್ ವಿಭಾಗದ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು. ರಾಜ್ಯ ಸಮಿತಿ ಮುಖಂಡ ಎಂಬಿ ಮೊಹಮ್ಮದ್ ಸಾಧಿಕ್ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಕಾಫಿ ಸ್ವಾಗತಿಸಿ, ಅಬ್ಬಾಸ್ ಹರ್ಲಡ್ಕ ವಂದಿಸಿದರು.