ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ಮಹಿಳಾ ಸುರಕ್ಷತೆಯ ಕುರಿತು ಮಾಹಿತಿ ಕಾರ್ಯಗಾರ

ಬಿ.ಸಿ.ರೋಡ್: ನ.30, ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ “ಮಹಿಳಾ ಸುರಕ್ಷತೆ ಹಾಗೂ ಸೈಬರ್ ಅಪರಾಧ” ಗಳ ಕುರಿತು ಕಾರ್ಯಾಗಾರವು ಮಂಗಳವಾರ ಕಾಲೇಜಿನಲ್ಲಿ ನಡೆಯಿತು.
ಬಂಟ್ವಾಳ ನಗರ ಠಾಣಾಧಿಕಾರಿ ಅವಿನಾಶ್, ಸೈಬರ್ ಅಪರಾಧ, ಸಾಮಾಜಿಕ ಜಾಲತಾಣಗಳ ಒಳಿತು – ಕೆಡುಕು, ಮೊಬೈಲ್ ಬಳಕೆ, ಲೈಂಗಿಕ ದೌರ್ಜನ್ಯ, ಇತ್ಯಾದಿ ವಿಚಾರಗಳ ಕುರಿತು ಮಾಹಿತಿ ನೀಡಿದರು.
ಬಂಟ್ವಾಳ ಸಂಚಾರಿ ಠಾಣಾಧಿಕಾರಿ ರಾಜೇಶ್ ‘ರಸ್ತೆ ಸುರಕ್ಷತಾ ನಿಯಮ’ ದ ಕುರಿತು ಮಾಹಿತಿ ನೀಡಿದರು. ಕಾಲೇಜು ಪ್ರಾಂಶುಪಾಲ ಬಿ. ಕೆ ಅಬ್ದುಲ್ ಲತೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,
ಪೊಲೀಸ್ ಇಲಾಖೆಯ ಜಿನ್ನಪ್ಪ, ಚಂದ್ರಿಕಾ, ವನಿತಾ, ನಾಗರಾಜ್, ರಾಘವೇಂದ್ರ, ಮಧು, ಪೋಕು ರಾಠೋಡ್, ಉಪನ್ಯಾಸಕರುಗಳಾದ ಅಬ್ದುಲ್ ಮಜೀದ್ ಎಸ್,
ಎಂ. ಡಿ. ಮಂಚಿ, ಮೊಹಮ್ಮದ್ ಶಿಹಾಬ್, ಕಲಾವತಿ, ಸಂಶುನ್ನಿಸ, ರಕ್ಷಿತಾ, ವತ್ಸಲಾ ಬೋಧಕೇತರ ಸಿಬ್ಬಂದಿ ಸುಹೈಲ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಫೀಝ ಸ್ವಾಗತಿಸಿ, ಝುಬೈದ ಸಲ್ಹ ವಂದಿಸಿದರು. ಮರಿಯಮ್ ಜಶೀರಾ ಕಾರ್ಯಕ್ರಮ ನಿರ್ವಹಿಸಿದರು.
