ಶಿವಮೊಗ್ಗ: ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಶಿವಮೊಗ್ಗ: ತುಂಗಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಶಿವಮೊಗ್ಗದ ಕುರುಬರಪಾಳ್ಯ ಬಳಿ ನಡೆದಿದೆ.
ತುಂಗಾನದಿಯಲ್ಲಿ ನೀರು ಪಾಲಾದವರನ್ನು ಮಹಮ್ಮದ್ ಫೈಸಲ್ (19) ಹಾಗೂ ಅಂಜುಂಖಾನ್ (19) ಎಂದು ಗುರುತಿಸಲಾಗಿದೆ.
ಸವಾಯಿಪಾಳ್ಯದ ಮಹಮ್ಮದ್ ಫೈಸಲ್ ಹಾಗೂ ಇಲಿಯಾಜ್ ನಗರದ ಅಂಜುಂಖಾನ್ ಪದವಿ ವಿದ್ಯಾರ್ಥಿಗಳಾಗಿದ್ದು, ಇಬ್ಬರೂ ಸ್ನೇಹಿತರಾಗಿದ್ದರು.





