September 26, 2026

ಚಿಕನ್‌ ಶವರ್ಮಾ ತಿಂದು: ಬಾಲಕಿ ಸಾವು

0
image_editor_output_image1767213129-1695111373141.jpg

ಚೆನ್ನೈ: ಚಿಕನ್‌ ಶವರ್ಮಾ ತಿಂದು ಫುಡ್‌ ಪಾಯ್ಸನ್‌ ಉಂಟಾದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ತಮಿಳುನಾಡಿನ ನಾಮಕ್ಕಲ್‌ನಲ್ಲಿ ಸೋಮವಾರ(ಸೆ.18 ರಂದು) ನಡೆದಿದೆ.

ಸೋಮವಾರ ಬಾಲಕಿಯ ತಂದೆ ರೆಸ್ಟೋರೆಂಟ್‌ ವೊಂದರಿಂದ ಚಿಕನ್‌ ಶವರ್ಮಾ ಸೇರಿದಂತೆ ಇತರೆ ಮಾಂಸಾಹಾರಿ ಆಹಾರವನ್ನು ತಂದಿದ್ದರು.

 

ಇದನ್ನು ಸೇವಿಸಿದ ಬಳಿಕ ಅದೇ ದಿನ ರಾತ್ರಿ ಬಾಲಕಿಗೆ ಫುಡ್‌ ಪಾಯ್ಸನ್‌ ಉಂಟಾದ ಪರಿಣಾಮ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಚಿಕಿತ್ಸೆ ಪಡೆದ ಬಳಿಕ ಮನೆಗೆ ಮರಳಿದ್ದ ಬಾಲಕಿ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾಳೆ ಎಂದು ವರದಿ ತಿಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!