ಕಲ್ಲಿನಿಂದ ಹೊಡೆದು ಯುವಕನ ಕೊಲೆ: ಇಬ್ಬರು ಆರೋಪಿಗಳ ಬಂಧನ

ಬೆಳಗಾವಿ: ಶಿವಬಸವ ನಗರದಲ್ಲಿ ನಡೆದ ನಾಗರಾಜ್ ಗಾಡಿವಡ್ಡರ್ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಹಂತಕರ ಪೈಕಿ ಇಬ್ಬರು ಆರೋಪಿಗಳನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ರಾಮನಗರದ ಗಾಡಿವಡ್ಡರ ನಿವಾಸಿ ನಾಗರಾಜ್ ಗಾಡಿವಡ್ಡರ್ (26) ಕೊಲೆಯಾದ ಯುವಕ. ಈತನ ಹಿಂಬದಿಯಿಂದ ಬಂದು ಕಲ್ಲಿನಿಂದ ಹೊಡೆದು ಹಂತಕರು ಕೊಲೆ ಮಾಡಿದ್ದರು.
ಸದ್ಯ ಕೊಲ್ಲಾಪುರದ ಎಲ್‌ಸಿಬಿ ಪೊಲೀಸರ ಸಹಕಾರದೊಂದಿಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಲ್ಲಾಪುರ ಮೂಲದ ಪ್ರಥಮೇಶ್ ಕಸಬೇಕರ್ (20), ಆಕಾಶ್ ಪವಾರ್ (21) ಬಂಧಿತ ಆರೋಪಿಗಳು.