May 20, 2026

ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಕಿರುಕುಳ: ಪೊಲೀಸರ ಕೈಗೆ ಸಿಕ್ಕಿಬಿದ್ದ ಟೆಕ್ಕಿ

0
image_editor_output_image392405192-1693770869641.jpg

ಬೆಂಗಳೂರು: ಚಂದದ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಖೆಡ್ಡಗೆ ಬೀಳಿಸಿ, ಮರ್ಯಾದೆ ಹರಾಜು ಹಾಕುವುದಾಗಿ ಬೆದರಿಕೆಯೊಡ್ಡುತ್ತಿದ್ದ ಟೆಕ್ಕಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಅಸ್ಸಾಂ ಮೂಲದ ಟೆಕ್ಕಿ ಫೈ‌ಸಲ್‌ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದ ಫೈಸಲ್ ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಓಪನ್ ಮಾಡುತ್ತಿದ್ದ. ಈ ನಕಲಿ ಖಾತೆ ಮೂಲಕ ಮದುವೆ ಆಗಿರೋ ಚೆಂದದ ಆಂಟಿಯರನ್ನ ಟಾರ್ಗೆಟ್‌ ಮಾಡಿ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದ.

ಇದಾದ ಕೆಲ ದಿನಗಳ ನಂತರ ಆ ಆಂಟಿಯರಿಗೆ ಕರೆ ಮಾಡ್ತಿದ್ದ ಟೆಕ್ಕಿ ಫೈಸಲ್, ಪದೇ ಪದೇ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ, ಆಮೇಲೆ ಲಕ್ಷ ಲಕ್ಷ ಹಣ ಕೇಳೋಕೆ ಶುರುಮಾಡ್ತಿದ್ದ.

ಗಾಬರಿಯಾದ ಆಂಟಿಯರು, ನಾನ್ ಹಣ ಕೊಡಲ್ಲ, ಬರೋದು ಇಲ್ಲ ಅಂತಾ ಅಂದ್ರೆ ದೈಹಿಕ ಸಂಪರ್ಕದ ವೀಡಿಯೋ ಕಳಿಸಿ ನಿನ್ನ ಗಂಡನಿಗೆ ಕಳಿಸ್ತೀನಿ. ಸೋಷಿಯಲ್ ಮೀಡಿಯಾದಲ್ಲಿ ಮಾನ ಹರಾಜು ಹಾಕ್ತೀನಿ ಅಂತಾ ಬೆದರಿಕೆ ಹಾಕ್ತಿದ್ದ.

Leave a Reply

Your email address will not be published. Required fields are marked *

error: Content is protected !!