March 21, 2026

ಮಂಗಳೂರು: ಯುವಕನ ಮೇಲೆ ತಂಡದಿಂದ ದಾಳಿ

0

ಮಂಗಳೂರು: ಯುವಕನ ಮೇಲೆ ತಂಡವೊಂದು ದಾಳಿ ನಡೆಸಿದ ಘಟನೆ ನ.29 ರ ಸೋಮವಾರ ರಾತ್ರಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗಾಯಗೊಂಡ ಯುವಕನನ್ನು ಶ್ರವಣ್ ಎಂದು ಗುರುತಿಸಲಾಗಿದೆ.

‘ಅಳಿಕೆ’ ಗ್ಯಾಂಗ್‌ಗೆ ಸೇರಿದ ಎಂಟು ಜನರ ತಂಡ ಮಾರಾಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಗುಂಪುಗಳ ನಡುವಿನ ಹಳೆ ದ್ವೇಷದಿಂದ ಈ ಕೃತ್ಯ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

2020 ರಲ್ಲಿ ಬರ್ಕೆಯಲ್ಲಿ ನಡೆದ ಇಂದ್ರಜಿತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.ಇಂದ್ರಜಿತ್ ನನ್ನು ಬೇಳೂರು ಗ್ಯಾಂಗ್ ಅಥವಾ ತಲ್ವಾರ್ ಜಗ್ಗಾ ಗ್ಯಾಂಗ್ ಕೊಲೆಗೈದಿತ್ತು. ಗಾಯಳು ಶ್ರವಣ್ ಇಂದ್ರಜಿತ್ ಕೊಲೆ ಪ್ರಕರಣದ ಆರೋಪಿಯ ಸಹೋದರನಾದ ಅಂಕಿತ್ ನ ಸ್ನೇಹಿತನಾಗಿದ್ದಾನೆ.

ಉರ್ವಾ ಪೊಲೀಸ್ ಠಾಣೆಯಲ್ಲಿ ಐಪಿಸಿ 307 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!