April 3, 2025

ಮಂಗಳೂರು: ಬೈಕ್ ನಲ್ಲಿ ತೆರಳುತ್ತಿದ್ದ ಸವಾರರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ದರೋಡೆ:
ಆರೋಪಿ ಮಂಗಳಮುಖಿ ಬಂಧನ

0

ಮಂಗಳೂರು: ಹೆದ್ದಾರಿಯಲ್ಲಿ ಒಬ್ಬಂಟಿಯಾಗಿ ಬೈಕ್ ನಲ್ಲಿ ಹೋಗುವ ಬೈಕ್ ಸವಾರರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮಂಗಳಮುಖಿಯನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌

ಬೆಂಗಳೂರು ನಗರದ ಇಜಿಪುರದ ಅಭಿಷೇಕ್ @ ಗೊಂಬೆ @ ಅನಾಮಿಕ ( 27) ಬಂಧಿತ ಮಂಗಳಮುಖಿ ಎಂದು ಗುರುತಿಸಲಾಗಿದೆ.

ಮಂಗಳೂರು ನಗರದ ನಂತೂರು ಪದವು ಬಳಿಯಿರುವ ಬಿ ಎಸ್ ಎನ್ ಎಲ್ ಎಕ್ಸ್‌ಚೇಂಜ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಣೇಶ್ ಶೆಟ್ಟಿ ರವರು ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಮಂಗಳ ಮುಖಿ ರಸ್ತೆಗೆ ಅಡ್ಡ ಬಂದು ಗಣೇಶ್ ಶೆಟ್ಟಿರವರನ್ನು ತಡೆದು ನಿಲ್ಲಿಸಿ, ಅವರ ಮುಖಕ್ಕೆ ಪೆಪ್ಪರ್ ಸ್ಪೇ ಮಾಡಿ ಅವರ ಕುತ್ತಿಯಲ್ಲಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದನು. ಈ ಪ್ರಕರಣದಲ್ಲಿ ಆರೋಪಿಯನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದಾಗ ಈತ ಮೂರು‌ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದುಬಂದಿದೆ.
ಬಂಧಿತವ ಆರೋಪಿ ಬಳಿಯಿಂದ ಒಟ್ಟು 71 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.

 

 

Leave a Reply

Your email address will not be published. Required fields are marked *

error: Content is protected !!