ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾಗ, ನಿಮ್ಮ ಪೂರ್ವಜರು ಕ್ಷಮಾಪಣಾ ಅರ್ಜಿ ಬರೆಯುತ್ತಿದ್ದರು: ವಕ್ಫ್ ಮಸೂದೆ ವಿರುದ್ಧ ಗೌರವ್ ಗೊಗೋಯಿ ಗುಡುಗು

ನವದೆಹಲಿ: ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು, ಕಾಂಗ್ರೆಸ್ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ನ ಉಪನಾಯಕ ಗೌರವ್ ಗೊಗೋಯ್ ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಮಾತನಾಡಿದ್ದು, ಸರ್ಕಾರ ಯಾವ ಸಂದೇಶವನ್ನು ನೀಡಲು ಬಯಸುತ್ತೀರ ಎಂದು ಪ್ರಶ್ನಿಸಿದ್ದಾರೆ.
“ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಮುದಾಯ, 1857 ರಲ್ಲಿ ಮಂಗಲ್ ಪಾಂಡೆ ಅವರೊಂದಿಗೆ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಸಮುದಾಯದ ಗೌರವ ಘನತೆಗಳಿಗೆ ಸರ್ಕಾರ ಮಸಿ ಬಳಿಯಬೇಕೆಂದಿದ್ದೀರಾ? ಎಂದು ಗೊಗೋಯ್ ಪ್ರಶ್ನಿಸಿದ್ದಾರೆ.
ನೀವು ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆಯುತ್ತಿದ್ದಾಗ, ನೀವು ಕ್ವಿಟ್ ಇಂಡಿಯಾ ಚಳವಳಿಯನ್ನು ಬೆಂಬಲಿಸದಿದ್ದಾಗ, ಆ ಸಮುದಾಯವು ಕ್ವಿಟ್ ಇಂಡಿಯಾ ಚಳವಳಿಯನ್ನು ಬೆಂಬಲಿಸಿತು. 1924 ರಲ್ಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಸಮುದಾಯದ ಪ್ರತಿಷ್ಠೆಯನ್ನು ನೀವು ಹಾಳು ಮಾಡಲು ಬಯಸುತ್ತೀರಿ. ಇದು ನಿಮ್ಮ ಒಡೆದು ಆಳುವ ನೀತಿ. ನಮಗೆ ರಾಷ್ಟ್ರೀಯತೆ ಎಂಬುದು ನಮಗೆ ಒಗ್ಗಟ್ಟು ಎಂದು ಗೊಗೋಯ್ ಹೇಳಿದ್ದಾರೆ.