March 12, 2026

ಏಪ್ರಿಲ್ 3 ರಿಂದ 7 ರ ವರೆಗೆ  ಮಡವೂರು ಸಿ ಎಂ ವಲಿಯುಲ್ಲಾಹಿ (ಖ.ಸಿ) ಮಖಾಂ ಶರೀಫ್ ಉರೂಸ್

0
image_editor_output_image1048399636-1743596993111

ಕಲ್ಲಿಕೋಟೆ: ಕಾಲ ಘಟ್ಟದ ಪವಾಡ ಪುರುಷ ಲಕ್ಷಾಂತರ ವಿಶ್ವಾಸಿಗಳ ಆಶ್ರಯ ಪುರುಷ ಜಾತಿ ಮತ ಧರ್ಮ ಗಡಿ ಗುರುತಿನ ಭೇದ ಭಾವ ಇಲ್ಲದೇ ಶಾಂತಿ ಪ್ರೀತಿ ಹರಸಿ ಬರುವ ಮನುಷ್ಯರಿಗೆ ತನ್ನ ಪವಾಡದ ಮೂಲಕ ಆತ್ಮೀಯ ಸಾಂತ್ವನ ನೀಡುವ ಮಹಾನ್ ವಲಿ ಖುತುಬುಝ್ಝಮಾನ್ ಸಿ ಎಂ ಅಬೂಬಕರ್ ಮುಸ್ಲಿಯಾರ್ ಮಡವೂರು ಇವರ ಮಖಾಂ ಶರೀಫ್ ನ 35 ನೇ ಉರೂಸ್ ಮುಬಾರಕ್  2025 ಏಪ್ರೀಲ್ 3ರಿಂದ 7 ರ ತನಕ ಅತೀ ವಿಜ್ರಂಬಣೆಯಿಂದ ನಡೆಯಲಿದೆ.

ಉರೂಸ್ ಕಾರ್ಯಕ್ರಮಕ್ಕೆ ಆಗಮಿಸಲಿರುವ ಲಕ್ಷಾಂತರ ವಿಶ್ವಾಸಿಗಳನ್ನು ಬರ ಮಾಡಿ ಕೊಳ್ಳಲು ಮಖಾಂ ನಗರಿ ಸಜ್ಜುಗೊಂಡಿದೆ.

ಶವ್ವಾಲ್ 4 ರಂದು ಸಮಸ್ತದ ಅಧ್ಯಕ್ಷ ಸಯ್ಯಿದ್ ಜಿಪ್ರಿ ತಂಙಳ್ ರವರ ನೇತೃತ್ವದಲ್ಲಿ  ಮಖಾಂ ಝಿಯಾರತ್ ನೊಂದಿಗೆ ಉರೂಸ್ ಗೆ ಚಾಲನೆ ದೊರಕಲಿದೆ. ಸಯ್ಯಿದ್ ಝೈನುಲ್ ಆಬೀದೀನ್ ತಙಳ್ ಕುನ್ನುಂಗೈ ದ್ವಜಾರೋಹಣ ಮಾಡಲಿದ್ದಾರೆ.‌ ಕುರ್ಅನ್ ಪಾರಾಯಣ, ಮಡವೂರ್ ಮೌಲಿದ್ ಪಾರಾಯಣ, ಅನುಸ್ಮರಣೆ ಉಲಮಾ ಶಿರೋಮಣಿಗಳ ನೇತೃತ್ವದಲ್ಲಿ ಅಂದು ನಡೆಯಲಿದೆ.

ಏಪ್ರಿಲ್ 3 ರಾತ್ರಿ 7 ಘಂಟೆಗೆ ಗುರುವಾರ ಸ್ವಲಾತ್ ಮಜ್ಲಿಸ್,ಇಷ್ಕ್ ಮಜ್ಲಿಸ್ ನಡೆಯಲಿದೆ.‌ ಏಪ್ರಿಲ್ 4 ರಂದು ರಾತ್ರಿ 7 ಘಂಟೆಗೆ
ಖಲೀಲ್ ರಹ್ಮಾನಿ ವಾಣಿಯನ್ನೂರು ರಿಂದ ಮತ ಪ್ರಭಾಷಣ ನಡೆಯಲಿದೆ.

ಏಪ್ರಿಲ್ 5ಬೆಳಿಗ್ಗೆ 10 ಘಂಟೆಗೆ ಸಿ ಎಂ ಮಖಾಂ ಶರೀಫ್ ಜಾಮಿಅ ಅಶ್ಹರಿಯ್ಯ ಉಸ್ರ (ಕುಟುಂಬ)ಸಂಗಮ ನಡೆಯಲಿದೆ.‌ ಸಂಜೆ 4 ಕ್ಕೆ ಸೌಹಾರ್ದ ಸಂಗಮದಲ್ಲಿ ಅಬ್ದುಸ್ಸಮದ್ ಪೂಕೋಟೂರು ಸಂದೇಶ ಭಾಷಣ ಮಾಡಲಿದ್ದಾರೆ. ರಾತ್ರಿ 7 ಕ್ಕೆ ಸಯ್ಯಿದ್ ಜಮಲುಲ್ಲೈಲಿ ಕೋಯ ತಂಙಳ್ ರ ನೇತೃತ್ವದಲ್ಲಿ ಮಜ್ಲಿಸುನ್ನೂರು ನಡೆಯಲಿದೆ.
ಏಪ್ರಿಲ್ 6 ಆದಿತ್ಯವಾರ ರಾತ್ರಿ 7 ಕ್ಕೆ ಧಿಕ್ರ್ ದುಹಾ ಸಮ್ಮೇಳನ ನಡೆಯಲಿದೆ. ಪಾಣಕ್ಕಾಡ್ ಸಯ್ಯಿದ್ ಸ್ವಾದಿಕಲಿ ತಂಙಳ್ ಉದ್ಘಾಟಿಸಲಿದ್ದಾರೆ.‌ ಮುಖ್ಯ ಅಥಿತಿಯಾಗಿ ಸಮಸ್ತ ಕಾರ್ಯದರ್ಶಿ ಆಲಿಕುಟ್ಟಿ ಉಸ್ತಾದ್ ಹಾಗೂ ಮುಖ್ಯ ಭಾಷಣ ಗಾರರಾಗಿ ಮೂಡಿಗೆರೆ ಖಾಝಿ ಕೊಯ್ಯೋಡು ಉಮರ್ ಮುಸ್ಲಿಯಾರ್ ಆಗಮಿಸಲಿದ್ದಾರೆ.

ಅಥಿತಿಗಳಾಗಿ ಕರ್ನಾಟಕದಿಂದ ಶೈಖುನಾ ತ್ವಾಖಾ ಉಸ್ತಾದ್, ಝೀನತ್ ಬಕ್ಷ್ ಖತೀಬ್ ಅಬುಲ್ ಅಕ್ರಂ ಮುಸ್ಲಿಯಾರ್, ಕುಕ್ಕಾಜೆ ತಂಙಳ್, ಬೆಳ್ತಂಗಡಿ ತಂಙಳ್, ಉಸ್ಮಾನ್ ಪೈಝಿ ತೋಡಾರು, ಇರ್ಷಾದ್ ದಾರಿಮಿ ಮಿತ್ತಬೈಲು, ಎಸ್ ಬಿ ಮುಹಮ್ಮದ್ ದಾರಿಮಿ ಉಪ್ಪಿನಂಗಡಿ, ಅಬ್ದುಲ್ ರಹ್ಮಾನ್ ಪೈಝಿ ಪರ್ತಿಪಾಡಿ,‌ ಹುಸೈನ್ ದಾರಿಮಿ ರೆಂಜಲಾಡಿ, ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಖಾಸಿಂ ದಾರಿಮಿ ನಂದಾವರ, ಎಂ ಎಸ್ ಮುಹಮ್ಮದ್ ಮೊದಲಾದ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ. ಅಲ್ಲದೇ ಕೇರಳದ ಹಲವಾರು ಸಾದಾತ್ ಗಳು ಸೂಫೀವರ್ಯರು,ಖ್ಯಾತ ಭಾಷಣಗಾರರು ಸಮಸ್ತದ ಕೇಂದ್ರ ಮುಶಾವರ ಸದಸ್ಯರು, ಖಾಝಿಗಳೂ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮುಖಂಡರು ಭಾಗವಹಿಸಲಿದ್ದಾರೆ.

ಏಪ್ರಿಲ್ 7 ಸೋಮವಾರ ಬೆಳಿಗ್ಗೆ 6ರಿಂದ ಸಂಜೆ 4 ತನಕ ಅನ್ನದಾನ ನಡೆಯಲಿದೆ ಎಂದು ಸಿ ಹೆಚ್ ಇಬ್ರಾಹೀಂ ಮುಸ್ಲಿಯಾರ್ ಪರ್ತಿಪ್ಪಾಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!