July 13, 2026

ಹಿಟ್ಟಿನ ಗಿರಣಿಯಲ್ಲಿ ವಿದ್ಯುತ್‌ ಸ್ಪರ್ಶ: ಒಂದೇ ಕುಟುಂಬದ ನಾಲ್ವರು ಸಾವು

0
image_editor_output_image1616471785-1693645575324.jpg

ಜೈಪುರ: ಹಿಟ್ಟಿನ ಗಿರಣಿಯಲ್ಲಿ ವಿದ್ಯುತ್‌ ಸ್ಪರ್ಶಗೊಂಡು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದಾರುಣ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿರುವುದು ವರದಿಯಾಗಿದೆ.

ಅರ್ಜುನ ಸಿಂಗ್ ಅವರಿಗೆ ಈ ಹಿಟ್ಟಿನ ಗಿರಣಿ ಸೇರಿದೆ. ಅರ್ಜುನ ಸಿಂಗ್‌ ಅವರು ಘಟನೆ ನಡೆದ ದಿನ ಅನ್ಯ ಕೆಲಸದ ಕಾರಣ ದೆಹಲಿಗೆ ತಲುಪಿದ್ದರು.

ಈ ಕಾರಣದಿಂದ ಅರ್ಜುನ ಸಿಂಗ್‌ ಅವರ ಪತ್ನಿ ಹಿಟ್ಟಿನ ಗಿರಣಿಯನ್ನು ನೋಡಿಕೊಳ್ಳುತ್ತಿದ್ದರು.

ವಿದ್ಯುತ್‌ ನಿಂದ ಚಲಿಸುವ ಹಿಟ್ಟಿನ ಗಿರಣಿಯನ್ನು ಬಳಸುವಾಗ ಅರ್ಜುನ ಸಿಂಗ್‌ ಅವರ ಪತ್ನಿಗೆ ವಿದ್ಯುತ್‌ ಶಾಕ್‌ ಹೊಡೆದಿದೆ.

ಇದನ್ನು ನೋಡಿದ ಅವರ ಇಬ್ಬರು ಮಕ್ಕಳು ಕೂಡಲೇ ತಾಯಿಯನ್ನು ರಕ್ಷಿಸಲು ಹೋಗಿದ್ದಾರೆ.

ಆದರೆ ಅವರ ಸಂಪರ್ಕಕ್ಕೆ ಬಂದ ಕಾರಣ ವಿದ್ಯುತ್‌ ಸ್ಪರ್ಶದಿಂದ ಮಕ್ಕಳು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅರ್ಜುನ ಅವರ ಮಾವ ಮೂವರನ್ನು ವಿದ್ಯುತ್‌ ಶಾಕ್‌ ನಲ್ಲಿ ನೋಡಿದಾಗ ಜೀವದ ಹಂಗು ತೊರೆದು ರಕ್ಷಣೆ ಮಾಡಲು ಹೋಗಿದ್ದಾರೆ. ಆದರೆ ಅವರು ಕೂಡ ವಿದ್ಯುತ್‌ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!