July 13, 2026

ಆದಿತ್ಯ – ಎಲ್‌1 ಉಪಗ್ರಹವನ್ನು PSLV-C57 ರಾಕೆಟ್‌ ನಲ್ಲಿ ಉಡಾವಣೆ

0
image_editor_output_image-1439703989-1693637184379.jpg

ಶ್ರೀಹರಿಕೋಟಾ: ಕೆಲ ದಿನಗಳ ಹಿಂದೆಯಷ್ಟೇ ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡರ್ ಇಳಿಸಿ ವಿಕ್ರಮ ಮೆರೆದಿದ್ದ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ತನ್ನ ಕಿರೀಟಕ್ಕೆ ಮತ್ತೊಂದು ಸಾಧನೆಯ ಗರಿ ಇಡಲು ಮುಂದಾಗಿದೆ.

ಭಾರತವು ಇದೇ ಮೊದಲ ಬಾರಿಗೆ ಸೂರ್ಯನ ಸುತ್ತ ಅಧ್ಯಯನ ನಡೆಸಲು ಮುಂದಾಗಿದ್ದು, ಆಂಧ್ರ ಪ್ರದೇಶದ ಶ್ರೀಹರಿಕೋಟಾ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಆದಿತ್ಯ – ಎಲ್‌1 ಉಪಗ್ರಹವನ್ನು PSLV-C57 ರಾಕೆಟ್‌ ನಲ್ಲಿ ಉಡಾವಣೆ ಮಾಡಲಾಗಿದೆ.

ಇಂದು ಉಡಾವಣೆಯಾದ ನೌಕೆಯು ಎಲ್-1 ಬಿಂದುವಿನಲ್ಲಿ ನಿಯೋಜನೆಯಾಗಲಿದೆ. 125 ದಿನಗಳ ಸುದೀರ್ಘ ಪಯಣ ಕೈಗೊಳ್ಳಲಿರುವ ನೌಕೆಯು ಭೂಮಿಯಿಂದ 15 ಲಕ್ಷ ಕಿ,ಮೀ ದೂರ ಪ್ರಯಾಣಿಸಲಿದೆ.

ಈ ಮೂಲಕ ಅತಿಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟ ಮೊದಲ ನೌಕೆ ಎಂಬ ಹೆಗ್ಗಳಿಕೆಯೂ ಆದಿತ್ಯ-ಎಲ್ 1 ಪಾತ್ರವಾಗಲಿದೆ.

Leave a Reply

Your email address will not be published. Required fields are marked *

You may have missed

error: Content is protected !!