ಮತ್ತೊಂದು ತಿರುವು ಪಡೆದುಕೊಂಡ ಸ್ನೇಹಿತನ ಕೊಲೆ ಪ್ರಕರಣ
ಮೈಸೂರು: ಸ್ನೇಹಿತನನ್ನೇ ಕೊಲೆ ಮಾಡಿ ತಾನು ದ್ವೇಷಿಸುತ್ತಿದ್ದ ವ್ಯಕ್ತಿಯ ಮೇಲೆ ಆರೋಪ ಬರುವಂತೆ ಸಂಚು ರೂಪಿಸಿದ್ದ ಪ್ರಕರಣ ಹೆಚ್‍ಡಿ.ಕೋಟೆಯ ನೇರಳೆಹುಂಡಿಯಲ್ಲಿ ನಡೆದಿದೆ.
ಕೊಲೆ ಮಾಡಿ ತಾನು ದ್ವೇಷಿಸುತ್ತಿದ್ದ ವ್ಯಕ್ತಿಯ ಮೇಲೆ ಅನುಮಾನ ಬರುವಂತೆ ಪ್ಲಾನ್ ಮಾಡಿದ ಕಿರಾತಕ ದಿನೇಶ್ ಎಂಬಾತ ಪೊಲೀಸರ ಅತಿಥಿಯಾಗಿದ್ದಾನೆ.
ಈ ಮೊದಲು ಗೃಹಿಣಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಲೆ ನಡೆದಿದೆ ಎನ್ನಲಾಗಿತ್ತು. ಆದರೆ ಪೊಲೀಸರ ತನಿಖೆಯಿಂದ ಹತ್ಯೆಯ ಕಾರಣ ಬಯಲಾಗಿದೆ.




