March 22, 2026

ವಿಟ್ಲ: ಅಪ್ರಾಪ್ತ 6ನೇ ತರಗತಿ ವಿದ್ಯಾರ್ಥಿನಿಯ ಅಪಹರಿಸಿ ಲೈಂಗಿಕ ಕಿರುಕುಳ: ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

0
IMG-20230825-WA0014.jpg



ವಿಟ್ಲ: ಅಪ್ರಾಪ್ತ ವಯಸ್ಕ ಬಾಲಕಿಯನ್ನು ಪುಸಲಾಯಿಸಿ ವ್ಯಕ್ತಿಯೊಬ್ಬ ಬೈಕ್ ನಲ್ಲಿ ಕರೆದುಕೊಂಡು ಹೋಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಮಹಮ್ಮದ್ ನೌಷಾ‌ದ್ ಎಂದು ಗುರುತಿಸಲಾಗಿದೆ.

ಆರೋಪಿ ಮಹಮ್ಮದ್ ನೌಷಾ‌ದ್ ಎಂಬಾತ ಅಪ್ರಾಪ್ತ ವಯಸ್ಕ ಬಾಲಕಿಯ ಮನೆಯ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಶಾಲೆಗೆ ತೆರಳಿದ್ದ ಆಕೆಯನ್ನು ಪುಸುಲಾಯಿಸಿ ವಿಟ್ಲ ಪೇಟೆಯಿಂದ ಉಳ್ಳಾಲ ಬೀಚಿಗೆ ಹೊಗುವಾ ಎಂದು ಹೇಳಿ ಕರೆದುಕೊಂಡು ಹೋಗಿ ಕೊಡಂಗಾಯಿ ಎಂಬಲ್ಲಿ ಅಪ್ಪಿ ಹಿಡಿದು ಚುಂಬಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಾಲಕಿಯು ಎಂದಿನಂತೆ ಮನೆಯಿಂದ ಶಾಲೆಗೆ ಹೊರಟಿದ್ದಳು ಆದರೆ ಆಕೆ ಶಾಲೆಗೆ ಬರದಿದ್ದಾಗ ಶಿಕ್ಷಕಿಯು ನಿಮ್ಮ ಮಗಳು ಈ ದಿನ ಶಾಲೆಗೆ ಬಂದಿರುವುದಿಲ್ಲವಾ? ಎಂಬುದಾಗಿ ಮನೆಯವರಲ್ಲಿ ವಿಚಾರಿಸಿದ್ದಾರೆ. ಈ ವೇಳೆ ವಿಷಯ ತಿಳಿದ ಬಾಲಕಿಯ ತಾಯಿಯು ಆಕೆಯ ಸಹಪಾಠಿಗಳಲ್ಲಿ ವಿಚಾರಿಸಿದಾಗ ಆಕೆಯು ಬಸ್ಸಿನಲ್ಲಿ ಬಂದು ಬೈಕ್ ನಲ್ಲಿ ಹೋಗಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!