July 13, 2026

ಮಂಗಳೂರು: ದನ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

0
IMG-20230820-WA0026.jpg

ಮಂಗಳೂರು: ಬಜ್ಪೆ ಠಾಣಾ ವ್ಯಾಪ್ತಿಯ ಬಡಗ ಎಡಪದವು ದಡ್ಡಿ ಎಂಬಲ್ಲಿ ದನ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉಳ್ಳಾಲದ ಮಲಾರ್, ಪಾವೂರು ಗ್ರಾಮದ ಬದ್ರಿಯಾ ನಗರದ ನಿವಾಸಿ ಇರ್ಫಾನ್ (30) ಮತ್ತು ಬಂಟ್ವಾಳದ ಸಿದ್ದಕಟ್ಟೆ ಗ್ರಾಮದ ಸಂಗಬೆಟ್ಟು ಗ್ರಾಮದ ಮೊಹಮ್ಮದ್ ಆರಿಫ್ ಅಲಿಯಾಸ್ ಪುಚ್ಚೇರಿ ಆರಿಫ್ (32) ಎಂದು ಗುರುತಿಸಲಾಗಿದೆ.

ಆ.14ರಂದು ರಾತ್ರಿ ಬಡಗ ಎಡಪದವು ಎಂಬಲ್ಲಿ ಮೂರು ಹಸುಗಳನ್ನು ಕಳವು ಮಾಡಿರುವ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಆ.19ರಂದು ಬಂಧಿಸಿದ್ದು, ಐದು ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!