March 18, 2026

ಮಂಗಳೂರು: ಅಕ್ರಮವಾಗಿ ಸಂಗ್ರಹಿಸಿದ್ದ 26 ಗ್ಯಾಸ್ ಸಿಲಿಂಡರ್ ಸಹಿತ ವಶ: ಆರೋಪಿ ಪೊಲೀಸರ ವಶಕ್ಕೆ

0
IMG-20230819-WA0036.jpg

ಮಂಗಳೂರು: ನಗರದ ಅಳಕೆ ನ್ಯೂಚಿತ್ರಾ ಸಮೀಪದ ಜನನಿಬಿಡ ವಸತಿ ಸಂಕೀರ್ಣದ ಬಳಿ ಗ್ಯಾಸ್ ಸಿಲಿಂಡರನ್ನು ಅಕ್ರಮವಾಗಿ ದಾಸ್ತಾನಿರಿಸಿದ ವ್ಯಕ್ತಿಯನ್ನು ಕದ್ರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನ್ಯೂ ಚಿತ್ರಾ ಟಾಕೀಸ್ ಬಳಿಯ ಶೇಖ್ ಗಾರ್ಡನ್ ಬಿಲ್ಡಿಂಗ್ ನಿವಾಸಿ ಶೇಖ್ ಅಶಫ್ ಉದ್ದೀನ್ (59) ಎಂದು ಗುರುತಿಸಲಾಗಿದೆ.

ಮಂಗಳೂರು ಗ್ಯಾಸ್ ಲೈಟ್ ಆ್ಯಂಡ್ ಸರ್ವೀಸ್ ಸೆಂಟರ್ ಅಂಗಡಿಯ ಪಕ್ಕದ ಸಣ್ಣ ಕೊಠಡಿಯಲ್ಲಿ ಪರವಾನಿಗೆ ಇಲ್ಲದೆ ಗ್ಯಾಸ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಅರ್ಧ ಗ್ಯಾಸ್ ತುಂಬಿದ 3 ಗೃಹ ಬಳಕೆಯ ಇಂಡೇನ್ ಮತ್ತು ಹೆಚ್‌ಪಿ ಗ್ಯಾಸ್ ಸಿಲಿಂಡರ್ ಸಹಿತ 26 ವಿವಿಧ ಆಳತೆಯ ಗ್ಯಾಸ್ ಸಿಲಿಂಡರ್‌ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!