ಕಾಸರಗೋಡು: ಸ್ನೇಹಿತೆಗೆ ಮೆಸೆಜ್ ಕಳುಹಿಸಿ ನೇಣಿಗೆ ಶರಣಾದ ವಿದ್ಯಾರ್ಥಿನಿ
ಕಾಸರಗೋಡು: ಸಹಪಾಠಿಗೆ ಮೆಸೆಜ್ ಕಳುಹಿಸಿ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಲಾಟಿ ಬಳಿ ನಡೆದಿದೆ.
ಮೈಲಾಟಿ ಎಕ್ಕೋಲ್ ನ ನೀತು ಕೃಷ್ಣ(21) ಮೃತಪಟ್ಟವರು.
ತನ್ನ ಸಹಪಾಠಿಗೆ ವಾಟ್ಸ್ ಅಪ್ ಸಂದೇಶ ಕಳುಹಿಸಿ ಈಕೆ ಈ ಕೃತ್ಯ ನಡೆಸಿದ್ದಾಳೆ.
ಸಂದೇಶ ಲಭಿಸಿದ ಕೂಡಲೇ ಸಹಪಾಠಿ ಈಕೆಯ ಮೊಬೈಲ್ ಗೆ ಕರೆ ಮಾಡಿದಾಗ ರಿಸೀವ್ ಮಾಡದಿದ್ದುದರಿಂದ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಇದರಂತೆ ಸಂಬಂಧಿಕರು ಮನೆಗೆ ತಲಪಿದಾಗ ನೇಣು ಬಿಗಿದಿರುವುದು ಕಂಡುಬಂದಿದೆ.
ಇನ್ನು ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ತಂದೆ ಕೆ . ಕೃಷ್ಣನ್ ಹೊಲಿಗೆ ಕಾರ್ಮಿಕರಾಗಿದ್ದು , ತಾಯಿ ಕೆ . ಟಿ ಶ್ರೀಲತಾ ಕಾಞ೦ಗಾಡ್ ಗೆ ತೆರಳಿದ್ದರು. ನೀತು ಕೃಷ್ಣ ಪದವಿ ಶಿಕ್ಷಣ ಪಡೆದು , ಬಿ . ಎಡ್ ಶಿಕ್ಷಣಕ್ಕೆ ಪೂರ್ವ ಸಿದ್ಧತೆ ನಡೆಸಿದ್ದಳು. ಈ ನಡುವೆ ವಿವಾಹ ನಿಶ್ಚಯ ನಡೆದಿತ್ತು ಎನ್ನಲಾಗಿದೆ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.”





