ವಿಟ್ಲ: ಬೈಕ್ ಗಳ ನಡುವೆ ಅಪಘಾತ: ಸವಾರ ಗಾಯ
ವಿಟ್ಲ: ಕಲ್ಲಡ್ಕ ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಉಕ್ಕುಡ ಚೆಕ್ ಪೋಸ್ಟ್ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ಸಂಭವಿಸಿ ಓರ್ವ ಗಾಯಗೊಂಡಿದ್ದಾರೆ.
ಉಕ್ಕುಡ ನಿವಾಸಿ ಅಬ್ದುಲ್ಲ ಕುಂಞಿ ಅವರು ಗಾಯಗೊಂಡಿದ್ದಾರೆ. ವಿಟ್ಲ ಕಡೆಯಿಂದ ಬರುತ್ತಿದ್ದ ಬೈಕ್ ಅಡ್ಯನಡ್ಕ ಕಡೆಯಿಂದ ಬಂದು ಬಲಕ್ಕೆ ತಿರುಗಿದ ಆಕ್ಟಿವಾ ಕ್ಕೆ ಡಿಕ್ಕಿಯಾಗಿದೆ. ಘಟನೆಯಿಂದ ಆಕ್ಟಿವಾ ಸವಾರ ಅಬ್ದುಲ್ಲ ಕುಂಞಿ ಕಾಲಿಗೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.





