ಕಾಸರಗೋಡು: ಕ್ವಾಟರ್ಸ್ ನಲ್ಲಿ ನೇಣು ಬಿಗಿದು ವ್ಯಾಪಾರಿ ಆತ್ಮಹತ್ಯೆ
ಕಾಸರಗೋಡು: ವ್ಯಾಪಾರಿಯೋರ್ವರು ಕ್ವಾಟರ್ಸ್ ನಲ್ಲಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಮುಳ್ಳೆರಿಯ ಸಮೀಪದ ನೆಟ್ಟಣಿಗೆಯಲ್ಲಿ ನಡೆದಿದೆ. ನೆಟ್ಟಣಿಗೆ ಯ ಭಾಸ್ಕರ ಚೆಟ್ಟಿಯಾರ್ (50) ಮೃತ ಪಟ್ಟವರು.
ಅವಿವಾಹಿತರಾಗಿದ್ದ ಭಾಸ್ಕರ ಕಳೇರಿ ಎಂಬಲ್ಲಿನ ಕ್ವಾಟರ್ಸ್ ನಲ್ಲಿ ವಾಸವಾಗಿದ್ದರು. ಶನಿವಾರ ಬೆಳಿಗ್ಗೆ ತಡವಾದರೂ ಬಾಗಿಲು ತೆರೆಯದಿದ್ದುರಿಂದ ಸಂಶಯಗೊಂಡು ಪರಸರವಾಸಿಗಳು ಕಿಟಿಕಿ ಮೂಲಕ ಗಮನಿಸಿದಾಗ ಫ್ಯಾನ್ ಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಆದೂರು ಠಾಣಾ ಪೊಲೀಸರು ಮಹಜರು ನಡೆಸಿದರು. ಆತ್ಮಹತ್ಯೆಗೆ ಕಾರಣ ಸ್ಪಷ್ಟಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.





