March 23, 2026

ಬಿಜೆಪಿ ಸಂಸದನ ಕಚೇರಿ ಧ್ವಂಸಗೊಳಿಸಿ ಸಿಬ್ಬಂದಿಗೆ ಹಲ್ಲೆ

0
image_editor_output_image-1567971267-1691299822136.jpg

ಉತ್ತರ ಪ್ರದೇಶ: ಭದೋಹಿ ಬಿಜೆಪಿ ಲೋಕಸಭಾ ಸಂಸದ ರಮೇಶ್‌ ಬಿಂದ್ ಅವರ ಕಚೇರಿಯ ಮೇಲೆ ಮೂವರು ದುಷ್ಕರ್ಮಿಗಳು ದಾಳಿ ನಡೆಸಿದ್ದು, ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಕಚೇರಿಯನ್ನು ಧ್ವಂಸಗೊಳಿಸಿದ ಘಟನೆ ಶನಿವಾರ ನಡೆದಿದೆ.

ಆರೋಪಿಗಳನ್ನು ತೌಸೀಫ್ ಸರೋಜ್, ವಿಶಾಲ್ ಮತ್ತು ಸತ್ಯಂ ಗುರುತಿಸಲಾಗಿದ್ದು,‌ ಅವರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಕಾಏಕಿ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಕಂಪ್ಯೂಟರ್ ಆಪರೇಟರ್ ಪ್ರದೀಪ್ ಬೈಂಡ್ (27) ರೊಂದಿಗೆ ಗಲಾಟೆ ನಡೆಸಿದ್ದಾರೆ. ಈ ವೇಳೆ ಪ್ರದೀಪ್‌ಗೆ ಥಳಿಸಿ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಗಲಾಟೆಯಲ್ಲಿ ಪ್ರದೀಪ್‌ ಗಂಭಿರವಾಗಿ ಗಾಯಗೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ, ಪ್ರದೀಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಪರಾಧ ವಿಬಾಗದ ಪೊಲೀಸ್‌ ಅಧಿಕಾರಿ ವಿನೋದ್ ಯಾದವ್ ತಿಳಿಸಿದ್ದಾರೆ.‌

Leave a Reply

Your email address will not be published. Required fields are marked *

error: Content is protected !!