ತುಳುವರ ನಂಬಿಕೆಗಳು ಪದ್ಧತಿಗಳು ಮೂಡನಂಬಿಕೆಗಳಲ್ಲ ಅವು ಮೂಲನಂಬಿಕೆಗಳು: ದೀಪಕ್ ಪೆರಾಜೆ: ಅಡ್ಯನಡ್ಕ ಜನತಾ ಕಾಲೇಜ್ ನಲ್ಲಿ ಆಟಿಕೂಟ ಕಾರ್ಯಕ್ರಮ
ತುಳುವರ ನಂಬಿಕೆಗಳು ,ಆಚರಣೆ ಮತ್ತು ಪದ್ಧತಿಗಳಿಗೆ ಅದರದೇ ಆದ ಮಹತ್ವವಿದೆ. ಕಾಲದ ನಿರ್ವಹಣೆ ಮತ್ತು ಆರೋಗ್ಯಕ್ಕೆ ಪೂರಕವಾದ ಔಷಧೀಯ ಗುಣಗಳಿರುವ ಆಹಾರ ಸೇವನೆಯಿಂದ ಅವರ ಬದುಕು ಸಮತೋಲನದಿಂದ ಕೂಡಿತ್ತು ಎಂದು ಬಂಟ್ವಾಳದ ವಕೀಲರಾದ ಶ್ರೀ ದೀಪಕ್ ಪೆರಾಜೆ ಹೇಳಿದರು. ಅವರು ಅಡ್ಯನಡ್ಕದ ಜನತಾ ಪದವಿ ಪೂರ್ವ ಕಾಲೇಜಿನ ಜನತಾ ದರ್ಪಣ ಸಾಹಿತ್ಯ ಸಂಘ ಮತ್ತು ವನಸಿರಿ ಇಕೋ ಕ್ಲಬ್ ವತಿಯಿಂದ ನಡೆದ ಆಟಿ ಕೂಟ ಆಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಜನತಾ ದರ್ಪಣ ಸಾಹಿತ್ಯ ಸಂಘ ಹಾಗೂ ವನಸಿರಿ ಇಕೋ ಕ್ಲಬ್ ನ 2023-24 ನೇ ಸಾಲಿನ ಉದ್ಘಾಟನೆಯು ಇದೇ ವೇದಿಕೆಯಲ್ಲಿ ನೆರವೇರಿತು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿ ಇದರ ಸಂಚಾಲಕರಾದ ಡಾಕ್ಟರ್ ಅಶ್ವಿನಿ ಕೃಷ್ಣಮೂರ್ತಿ ಸಂದರ್ಭೋಚಿತವಾಗಿ ಮಾತನಾಡಿದರು.ಅಡ್ಯನಡ್ಕ ಎಜುಕೇಶನ್ ಸೊಸೈಟಿ ಇದರ ಅಧ್ಯಕ್ಷರಾದ ಶ್ರೀ ಗೋವಿಂದ ಪ್ರಕಾಶ್ ಸಾಯ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಿ ಶ್ರೀನಿವಾಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿಂದಿ ಉಪನ್ಯಾಸಕರಾದ ಶ್ರೀ ಸೋಮಶೇಖರ್ ಅತಿಥಿಗಳನ್ನು ಪರಿಚಯಿಸಿದರು. ಇಕೋ ಕ್ಲಬ್ ನ ಸಂಚಾಲಕರಾದ ಶ್ರೀ ರವಿಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ವಿಜ್ಞಾನ ವಿಭಾಗದ ನಮಿತಾ ಸ್ವಾಗತಿಸಿದರು. ವಿಜ್ಞಾನ ವಿಭಾಗದ ಮನ್ವಿತ ನಿರೂಪಿಸಿದ ಕಾರ್ಯಕ್ರಮ ದ್ವಿತೀಯ ವಾಣಿಜ್ಯ ವಿಭಾಗದ ಪೂಜಾ ಶ್ರೀ ಯವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಸಭಾ ಕಾರ್ಯಕ್ರಮದ ನಂತರ ಸಾಂಪ್ರದಾಯಿಕ ಅಡುಗೆ, ತಿನಿಸುಗಳ ಭೋಜನ ವ್ಯವಸ್ಥೆ ಮಾಡಲಾಗಿತ್ತು.



