ಆರೋಪಿ ಸುಮಂತ್ ಪೂಜಾರಿ ಬಜರಂಗದಳದ ಕಾರ್ಯಕರ್ತನಲ್ಲ: ಬಜರಂಗದಳದ ಮೂಲ್ಕಿ ಪ್ರಖಂಡ ಸ್ಪಷ್ಟನೆ
ಮಂಗಳೂರು: ಬಜರಂಗದಳದ ಮೂಲ್ಕಿ ಪ್ರಖಂಡ ಈ ಕುರಿತು ಸ್ಪಷ್ಟೀಕರಣ ನೀಡಿದೆ. ‘ಆರೋಪಿ ಸುಮಂತ್ ಪೂಜಾರಿ ಬಜರಂಗ ದಳದ ಕಾರ್ಯಕರ್ತನಲ್ಲ. ವಿಡಿಯೊ ಮಾಡುತ್ತಿದ್ದ ಆರೋಪಿಯನ್ನು ಬಜರಂಗದಳದವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನು ಸಹಿಸಲಾಗದ ಕಿಡಿಗೇಡಿಗಳು ಆರೋಪಿಯು ಬಜರಂಗ ದಳದ ಕಾರ್ಯಕರ್ತ ಎಂದು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಬಜರಂಗ ದಳದ ಮೂಲ್ಕಿ ಪ್ರಖಂಡದ ಅಮಿತ್ ಶೆಟ್ಟಿ ಎಸ್ ಕೋಡಿ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಆರೋಪಿಯು ಕೇಸರಿ ಶಾಲು ಹಾಕಿರುವ ಚಿತ್ರವನ್ನು ಕಾಂಗ್ರೆಸ್‌ನ ಕರ್ನಾಟಕ ಘಟಕವು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಬಿಜೆಪಿ ರಕ್ಷಣಾ ಪಡೆ’ಯವನೊಬ್ಬ ಹಿಂದೂ ಹೆಣ್ಣುಮಕ್ಕಳ ವಿಡಿಯೊ ಮಾಡಿ ಸಿಕ್ಕಿಬಿದ್ದಿದ್ದಾನೆ. ಈತ ವಿಡಿಯೊ ಮಾಡಿ ಬಿಜೆಪಿ ಕಚೇರಿಗೆ ಕಳುಹಿಸುತ್ತಿದ್ದನೇ? ಅಥವಾ ಸಿ.ಟಿ.ರವಿ, ಪ್ರತಾಪಸಿಂಹ ಅವರಿಗೆ ಕಳಿಸುತ್ತಿದ್ದನೇ? ಇವನಿಂದ ಸಂತ್ರಸ್ತಳಾದ ಯುವತಿ ಹಿಂದೂವಲ್ಲವೇ? ಈತನ ಕೃತ್ಯದ ಹಿಂದೆ ಯಾವ ಷಡ್ಯಂತ್ರವಿದೆ? ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯ ಬಿಜೆಪಿಯ ಎಲ್ಲಾ ಖಾಸಗಿ ತನಿಖಾಧಿಕಾರಿಗಳು ಏಕೆ ಮೌನವಾಗಿದ್ದಾರೆ’ ಎಂದು ಪ್ರಶ್ನೆ ಮಾಡಿದೆ.





