ವಿಟ್ಲದಲ್ಲಿ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ: ಬಿಜೆಪಿ ನಾಯಕರು ಮೌನವೇಕೆ?: ಕೃಪಾ ಅಮರ್ ಆಳ್ವಾ
ಮಂಗಳೂರು: ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದು ಸಂವಿಧಾನಕ್ಕೆ, ಸತ್ಯಕ್ಕೆ ಸಂದ ಜಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೃಪಾ ಅಮರ್ ಆಳ್ವ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಒಂದು ಒಳ್ಳೆಯ ನಡೆಯಾಗಿದೆ ಎಂದರು.
ವಿಟ್ಲದಲ್ಲಿ ದಲಿತ ಅಪ್ರಾಪ್ತೆಯ ಮೇಲೆ ಲೈಂಗಿಕ ಅತ್ಯಾಚಾರ ಪ್ರಕರಣ ನಡೆದಿದೆ. ಉಡುಪಿಯಲ್ಲಿ ವಿಡಿಯೋ ಪ್ರಕರಣ ನಡೆದಾಗ ಎಬಿವಿಪಿಯವರು, ಎಲ್ಲಾ ಬಿಜೆಪಿ ನಾಯಕರು, ಎಂಎಲ್‌ಸಿಗಳು ಎಲ್ಲರೂ ಬೃಹತ್ ಪ್ರತಿಭಟನೆ ಮಾಡಿದರು.
ಆದರೆ ಇಂದು ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ ಆದಾಗ ಇವರೆಲ್ಲರೂ ಯಾಕೆ ಬರಲಿಲ್ಲ.
ಪ್ರತಿಭಟನೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.
ಸಾಮಾಜಿಕ ಹೋರಾಟಗಾರರು ಎಲ್ಲಿ ಹೋಗಿದ್ದರು ಎಂಬುದಕ್ಕೆ ಸಂಘಪರಿವಾರದ ನಾಯಕರು ಉತ್ತರ ನೀಡಬೇಕು ಎಂದರು.
ವಿಟ್ಲದಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಮನೆಗೆ ಹೋಗಿ ಮಾತನಾಡಿದ್ದೇನೆ.
ಶಾಲೆಗೆ ಹೋಗುವ 10ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು ಸಂತ್ರಸ್ತೆಗೆ ನೀಡಬೇಕಾದ ಎಲ್ಲಾ ವ್ಯವಸ್ಥೆ ಮಾಡಲು ನಾವು ಬದ್ಧರಿದ್ದೇವೆ.
ಕಾನೂನಾತ್ಮಕವಾಗಿ ಹೇಗೆ ಕ್ರಮ ವಹಿಸಬೇಕು ಅದನ್ನು ನಾವು ನಿರ್ವಹಿಸಲಿದ್ದೇವೆ ಎಂದರು.





