ಕುಶಾಲನಗರ: ಡ್ಯಾಂ ಬಳಿ ಸೆಲ್ಫಿ ತೆಗೆಯಲು ಹೋಗಿ ನೀರುಪಾಲಾದ ಯುವಕ
ಕುಶಾಲನಗರ: ಯುವಕನೋರ್ವ ಡ್ಯಾಂ ಬಳಿ ಸೆಲ್ಫಿ ತೆಗೆಯಲು ಹೋಗಿ ನೀರುಪಾಲಾದ ಘಟನೆ ಕುಶಾಲನಗರ ತಾಲೂಕಿನ ಹಾರಂಗಿಯಲ್ಲಿ ನಡೆದಿದೆ.
ಬೆಂಗಳೂರು ಮೂಲದ ಸಂದೀಪ್ ನೀರುಪಾಲಾದ ಯುವಕ ಎಂದು ಗುರುತಿಸಲಾಗಿದೆ.
ಪ್ರವಾಸಕ್ಕೆಂದು ಮೂವರು ಸ್ನೇಹಿತರ ಜೊತೆ ಬಂದ ಸಂದೀಪ್ ಹಾರಂಗಿ ಅಣೆಕಟ್ಟು ಮುಂಭಾಗದ ಸೇತುವೆ ಬಳಿ ಸೆಲ್ಫಿ ತೆಗೆಯುವಾಗ ನೀರುಪಾಲಾಗಿದ್ದಾನೆ.
ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬಂದಿಗಳ ಆಗಮಿಸಿ ಶೋದ ಕಾರ್ಯ ನಡೆಸಿದರು.





