March 23, 2026

ಸುರತ್ಕಲ್‌: ಎಟಿಎಂ ಕೇಂದ್ರಕ್ಕೆ ಜೆಸಿಬಿ ನುಗ್ಗಿಸಿ ಕಳ್ಳತನಕ್ಕೆ ಯತ್ನ, ಸೈರನ್ ಕೇಳಿ ಓಡಿ ಹೋದ ಕಳ್ಳರು

0
image_editor_output_image-1274564943-1691129163425.jpg

ಮಂಗಳೂರು: ಸುರತ್ಕಲ್‌ ನ ಸೌತ್ ಇಂಡಿಯನ್ ಬ್ಯಾಂಕ್ ಬ್ರ್ಯಾಂಚ್‌ ಪಕ್ಕದಲ್ಲಿರುವ ಎಟಿಎಂ ಕೇಂದ್ರದಲ್ಲಿ ಹಣ ಲೂಟಿಗೆ ಯತ್ನಿಸಿ ವಿಫಲವಾದ ಘಟನೆ ಆ.4 ರ ಶುಕ್ರವಾರ ನಡೆದಿದೆ.

ಎಟಿಎಂ ಕೇಂದ್ರಕ್ಕೆ ಜೆಸಿಬಿ ನುಗ್ಗಿಸಿ ಕಳ್ಳತನಕ್ಕೆ ಯತ್ನಿಸಿದ್ದು, ಸೈರನ್ ಆಗಿದ್ದು ಕಂಡು ಕಳ್ಳರು ಓಡಿ ಹೋಗಿದ್ದಾರೆ ಎನ್ನಲಾಗಿದೆ. ಡಿಸಿಪಿ ದಿನೇಶ್ ಕುಮಾರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳ ಆಗಮಿಸಿದೆ.

ಇದೀಗ ಜೆಸಿಬಿಯೊಂದು ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಕದ್ದು ಹೋಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ಜೆಸಿಬಿ ಹುಡುಕಾಟಕ್ಕೆ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!