ತಂದೆಯೊಂದಿಗೆ ಶಾಲೆಗೆ ತೆರಳುತ್ತಿದ್ದಾಗ ಬಸ್ಸಿನಡಿಗೆ ಸಿಲುಕಿ ಬಾಲಕಿ ಸಾವು
ಹೈದರಾಬಾದ್: ಮೂರನೇ ತರಗತಿ ವಿದ್ಯಾರ್ಥಿನಿ ತಂದೆಯೊಂದಿಗೆ ಶಾಲೆಗೆ ತೆರಳುತ್ತಿದ್ದಾಗ ಬಸ್ಸಿನಡಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ದೆಹಲಿ ಪಬ್ಲಿಕ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ದಿಕ್ಷಿತಾ (8) ಮೃತ ಬಾಲಕಿ.
ದಿಕ್ಷಿತಾ ತನ್ನ ತಂದೆಯೊಂದಿಗೆ ಸ್ಕೂಟಿಯಲ್ಲಿ ಶಾಲೆಗೆ ಹೋಗುತ್ತಿದ್ದಳು.
ರಸ್ತೆಯಲ್ಲಿ ಗುಂಡಿಗಳು ಇದ್ದ ಕಾರಣ ಸ್ಕೂಟಿಯು ಸ್ಕಿಡ್ ಆಗಿ ದಿಕ್ಷಿತಾ ಹಾಗೂ ಆಕೆಯ ತಂದೆ ಕಿಶೋರ್ ರಸ್ತೆಗೆ ಎಸೆಯಲ್ಪಟ್ಟರು.





