ಕಾಸರಗೋಡು: ರೈಲಿನಲ್ಲಿ ಅಸಭ್ಯ ವರ್ತನೆ: ಆರೋಪಿ ಪೊಲೀಸರ ವಶಕ್ಕೆ
ಕಾಸರಗೋಡು: ರೈಲಿನಲ್ಲಿ ಅಸಭ್ಯವಾಗಿ ವರ್ತಿಸಿದ ಕಣ್ಣೂರು ನಿವಾಸಿಯೋರ್ವನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಕಣ್ಣೂರು ಪರಪ್ಪನಂಗಡಿಯ ಜೋರ್ಜ್ ಜೋಸೆಫ್ (51) ಬಂಧಿತ ಆರೋಪಿ.
ಸೋಮವಾರ ಮಧ್ಯಾಹ್ನ ಕೊಯಮುತ್ತೂರು-ಮಂಗಳೂರು ಇಂಟರ್ ಸಿಟಿ ರೈಲಿನಲ್ಲಿ ಈ ಘಟನೆ ನಡೆದಿದೆ.
ಶೋರ್ನೂರಿನಿಂದ ಮಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದ್ದು, ಕಣ್ಣೂರು- ಪಯ್ಯ ನ್ನೂರು ನಡುವೆ ಈತ ಅಸಭ್ಯವಾಗಿ ವರ್ತಿಸಿರುವುದಾಗಿ ರೈಲ್ವೆ ಪೊಲೀಸರಿಗೆ ದೂರು ಲಭಿಸಿದ್ದು, ಈತನ ವರ್ತನೆ ಬಗ್ಗೆ ಮೊಬೈಲ್ ನಲ್ಲಿ ತೆಗೆದ ಫೋಟೋಗಳು ಪೊಲೀಸರಿಗೆ ಲಭಿಸಿತ್ತು. ಇದರಂತೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.”





