ಬಂಟ್ವಾಳ ಪುರಸಭೆಯ ತ್ಯಾಜ್ಯ ಸಾಗಿಸುವ ಘನ ವಾಹನ ಆಟೋ ರಿಕ್ಷಾಕ್ಕೆ ಢಿಕ್ಕಿ: ಓರ್ವ ಮಹಿಳೆ ಸೇರಿದಂತೆ ಇಬ್ಬರಿಗೆ ಗಾಯ
ಬಂಟ್ವಾಳ: ಬಂಟ್ವಾಳ ಪುರಸಭೆಯ ತ್ಯಾಜ್ಯ ಸಾಗಿಸುವ ಘನ ವಾಹನವು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಬಂಟ್ವಾಳ ಪುರಸಭೆಯಿಂದ ಬಂಟ್ವಾಳ ಮುಖ್ಯ ರಸ್ತೆಗೆ ಹೊರಟ ಪುರಸಭೆಯ ತ್ಯಾಜ್ಯ ಸಾಗಾಟ ಘನ ವಾಹನವು ಬಿ ಸಿ ರೋಡ್ ನಿಂದ ಬಂಟ್ವಾಳ ಕಡೆಗೆ ಹೋಗುತಿದ್ದ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ.
ಈ ಸಂದರ್ಭದಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಪ್ರಯಾಣಿಕರಿಗೆ ಕಣ್ಣು, ಮುಖ, ಎದೆಗೆ ಗಂಭೀರ ಗಾಯಗಳಾಗಿವೆ.
ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪುರಸಭೆಯ ವಾಹನವನ್ನು ಪರಿಶೀಲಿಸಿದಾಗ ಈ ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಅವಧಿ ಮುಗಿದು 2 ವರ್ಷ ಕಳೆದಿದ್ದು, ನವೀಕರಣ ಆಗದಿರುವುದು ಕಂಡು ಬಂದಿದೆ.




