ವಿಟ್ಲ: ಕೆದಿಲ ಗ್ರಾಮದಲ್ಲಿ ಧರೆಕುಸಿತ, ಕೃಷಿ ಭೂಮಿ ಜಲಾವೃತ
ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಯಿಂದಾಗಿ ವಿಟ್ಲದ ಕೆದಿಲ ಗ್ರಾಮದ ಮುರುವ ಎಂಬಲ್ಲಿ ಧರೆಕುಸಿದು ನೀರುಹರಿಯುವ ತೋಡಿಗೆ ಬಿದ್ದ ಹಿನ್ನೆಲೆಯಲ್ಲಿ ಕೃಷಿ ಭೂಮಿ ಜಲಾವೃತವಾಗಿದೆ.
ಮುರುವ ನಿವಾಸಿ ಮೋನಪ್ಪ ಗೌಡರವರ ಮಾಲಕತ್ವದ ಕೃಷಿ ಭೂಮಿಗೂ ಮಣ್ಣು ಬಿದ್ದಿದೆ.
ತೋಡಿಗೆ ಮಣ್ಣು ಬಿದ್ದ ಮರಿಣಾಮ ನೀರು ಕೃಷಿಭೂಮಿಗಳಿಗೆ ನುಗ್ಗಿದ್ದು, ಇದರಿಂದಾಗಿ ಕೃಷಿ ನಾಶವಾಗಿದೆ.




