March 13, 2026

ಜಿಮ್ ವರ್ಕ್ ಔಟ್ ಮಾಡುವಾಗ ಕುಸಿದು ಬಿದ್ದು ಯುವಕ ಮೃತ್ಯು

0
image_editor_output_image-487434950-1689842848392.jpg

ನವದೆಹಲಿ: ಅತ್ಯಂತ ದುರದೃಷ್ಟಕರ ಘಟನೆಯೊಂದರಲ್ಲಿ, ಉತ್ತರ ದೆಹಲಿಯ ರೋಹಿಣಿ ಪ್ರದೇಶದಲ್ಲಿನ ಜಿಮ್ ಒಂದರಲ್ಲಿ ವರ್ಕ್ ಔಟ್ ಮಾಡುವ ವೇಳೆ ಯುವಕನೊಬ್ಬ ಏಕಾಏಕಿ ಕುಸಿದು ಬಿದ್ದು ಮೃತಪಟ್ಟ ಘಟನೆಯೊಂದು ನಡೆದಿದೆ.

ಮೃತ ಯುವಕನನ್ನು ರೋಹಿಣಿ ಸೆಕ್ಟರ್ 19ರ ನಿವಾಸಿ ಸಕ್ಷಮ್ ಪೃಥಿ (24 ವರ್ಷ) ಎಂದು ಗುರುತಿಸಲಾಗಿದೆ.

ದೆಹಲಿಯ ಸೆಕ್ಟರ್ 15ರ ಜಿಂಪ್ಲೆಕ್ಸ್ ಫಿಟ್‌ನೆಸ್ ಝೋನ್‌ನಲ್ಲಿ ಮಂಗಳವಾರ ಬೆಳಗ್ಗೆ 7:30ಕ್ಕೆ ಈ ಘಟನೆ ನಡೆದಿದ್ದು,

ಜಿಮ್ ನಲ್ಲಿ ಇರುವ ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಇತರ ಯುವಕರು ಸೇರಿ ಸಕ್ಷಮ್ ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಆದರೆ ದುರದೃಷ್ಟವಶಾತ್ ಸಕ್ಷಮ್ ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರೆಳೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!